HomeLatest NewsBIG NEWS: ದೇಶ ವಿಭಜನೆಗೆ ಕಾಂಗ್ರೆಸ್, ಜಿನ್ನಾ, ಬ್ಯಾಟನ್ ಕಾರಣ, ಅವರೇ ಅಪರಾಧಿಗಳು: NCERT ಪಠ್ಯದಲ್ಲಿ...

BIG NEWS: ದೇಶ ವಿಭಜನೆಗೆ ಕಾಂಗ್ರೆಸ್, ಜಿನ್ನಾ, ಬ್ಯಾಟನ್ ಕಾರಣ, ಅವರೇ ಅಪರಾಧಿಗಳು: NCERT ಪಠ್ಯದಲ್ಲಿ ಉಲ್ಲೇಖ

ನವದೆಹಲಿ: ದೇಶ ವಿಭಜನೆಗೆ ಕಾಂಗ್ರೆಸ್, ಜಿನ್ನಾ, ಮೌಂಟ್ ಬ್ಯಾಟನ್ ಅವರೇ ಹೊಣೆ ಎಂದು ಎನ್.ಸಿ.ಇ.ಆರ್.ಟಿ. ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್(ಎನ್.ಸಿ.ಇ.ಆರ್.ಟಿ.) ಪ್ರಕಟಿಸಿದ ದೇಶ ವಿಭಜನೆಯ ಕರಾಳ ದಿನ ಎಂಬ ವಿಶೇಷ ಪಠ್ಯಕ್ರಮದಲ್ಲಿ ದೇಶ ವಿಭಜನೆಗೆ ಕಾಂಗ್ರೆಸ್, ಮೊಹಮ್ಮದ್ ಅಲಿ ಜಿನ್ನಾ ಮತ್ತು ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರೇ ಕಾರಣವೆಂದು ಉಲ್ಲೇಖಿಸಲಾಗಿದೆ.

ಜಿನ್ನಾ ದೇಶ ವಿಭಜನೆಯನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ಅದನ್ನು ಅಂಗೀಕರಿಸಿತು. ಮೌಂಟ್ ಬ್ಯಾಟನ್ ಅದನ್ನು ಜಾರಿಗೊಳಿಸಿದರು ಎಂದು ಅಧ್ಯಾಯದಲ್ಲಿ ಹೇಳಲಾಗಿದ್ದು, ಈ ಮೂವರನ್ನು ದೇಶ ವಿಭಜನೆಯ ಅಪರಾಧಿಗಳು ಎಂದು ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular