HomeLatest NewsBREAKING: ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ ಮಹಿಳೆ ಸೇರಿ ಇಬ್ಬರು ಅರೆಸ್ಟ್ | VIDEO

BREAKING: ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ ಮಹಿಳೆ ಸೇರಿ ಇಬ್ಬರು ಅರೆಸ್ಟ್ | VIDEO

ಬೆಂಗಳೂರು: ನೋ ಪಾರ್ಕಿಂಗ್ ವಿಚಾರಕ್ಕೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಬ್ಬರನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಹಿರಲ್ ವ್ಯಾಸ್, ಮೊಹಮ್ಮದ್ ಸರ್ಬಸ್ ಬಂಧಿತ ಆರೋಪಿಗಳು. ನಿನ್ನೆ ಮಧ್ಯಾಹ್ನ ಯಲಹಂಕ ರೈತರ ಸಂತೆ ಬಳಿ ಘಟನೆ ನಡೆದಿದೆ. ನೋ ಪಾರ್ಕಿಂಗ್ ನಲ್ಲಿ ಮೊಹಮ್ಮದ್ ಸರ್ಬಸ್ ಬೈಕ್ ನಿಲ್ಲಿಸಿದ್ದ. ಈ ವೇಳೆ ಕರ್ತವ್ಯದಲ್ಲಿದ್ದ ಪಿಎಸ್ಐ ನಿರ್ಮಲಾ ಅವರು ಬೈಕ್ ಗೆ ಕ್ಲಾಂಪ್ ಹಾಕಿದ್ದರು. ಆಗ ಪೊಲೀಸರೊಂದಿಗೆ ಕಿರಿಕ್ ತೆಗೆದು ಮೊಹಮ್ಮದ್ ಸರ್ಬಸ್ ಅವಾಚ್ಯವಾಗಿ ನಿಂದಿಸಿದ್ದ. ಸ್ಥಳಕ್ಕೆ ಬಂದ ಮಹಿಳೆ ಹಿರಲ್ ವ್ಯಾಸ್ ಕೂಡ ಪೊಲೀಸರನ್ನು ನಿಂದಿಸಿದ್ದಲ್ಲದೆ ತನ್ನ ಬೈಕ್ ನೀಡಿ ಮೊಹಮ್ಮದ್ ಸರ್ಬಸ್ ನನ್ನು ಸ್ಥಳದಿಂದ ಕಳುಹಿಸಿದ್ದಳು. ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular