ಚಿಕ್ಕಮಗಳೂರು: ಓವರ್ ಟ್ಯಾಂಕ್ ತೆರವು ವೇಳೆ ಅವಘಡ ಸಂಭವಿಸಿದೆ. ಮುಂಜಾಗೃತಾ ಕ್ರಮ ಕೈಗೊಳ್ಳದ ಕಾರಣಕ್ಕೆ ಟ್ಯಾಂಕ್ ಏಕಾಏಕಿ ಕೆಳಗೆ ಬಿದ್ದು ಪುದಿಪುಡಿಯಾಗಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಗಾಯಗೊಂಡಿದ್ದಾರೆ.
ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದಲ್ಲಿ ಈ ಘತನೆ ನಡೆದಿದೆ. 80 ವರ್ಷ ಹಳೆಯದಾದ ನೀರಿನ ಟ್ಯಾಂಕ್ ತೆರವುಗೊಳಿಸುವ ವೇಳೆ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಏಕಾಏಕಿ ತೆರವು ಮಾಡುತ್ತಿದ್ದಂತೆ ಟ್ಯಾಂಕ್ ಕಳಚಿ ಬಿದ್ದು, ಪುಡಿಪುಡಿಯಾಗಿದೆ. ರಸ್ತೆ ಮೇಲೆ ಹೋಗುತ್ತಿದ್ದ ವಾಹನ ಸವಾರರು, ಸಾರ್ವಜನಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.