HomeLatest NewsBREAKING: ದೇಶದ ಜನತೆಗೆ ಮೋದಿ ಗುಡ್ ನ್ಯೂಸ್: ತೆರಿಗೆ ಹೊರೆ ಭಾರೀ ಇಳಿಕೆ, ಇಂದಿನಿಂದಲೇ ‘ವಿಕಸಿತ...

BREAKING: ದೇಶದ ಜನತೆಗೆ ಮೋದಿ ಗುಡ್ ನ್ಯೂಸ್: ತೆರಿಗೆ ಹೊರೆ ಭಾರೀ ಇಳಿಕೆ, ಇಂದಿನಿಂದಲೇ ‘ವಿಕಸಿತ ಭಾರತ ರೋಜ್ ಗಾರ್’ ಯೋಜನೆ ಜಾರಿ

ನವದೆಹಲಿ: ದೀಪಾವಳಿಗೆ ಜಿಎಸ್‌ಟಿ ಸಂಬಂಧ ದೊಡ್ಡ ಗಿಫ್ಟ್ ಕೊಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಲವು ವಸ್ತುಗಳ ಮೇಲಿನ ತೆರಿಗೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಇದರಿಂದ ಹಲವು ಸರಕುಗಳ ಮೇಲಿನ ದರ ಕಡಿಮೆಯಾಗಲಿದೆ. ಜಿಎಸ್‌ಟಿ ತಿದ್ದುಪಡಿಯಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತದೆ. ದೀಪಾವಳಿಗೆ ಜಿಎಸ್‌ಟಿ ಸಂಬಂಧ ದೊಡ್ಡ ಗಿಫ್ಟ್ ನೀಡಲಿದ್ದೇವೆ. ಹಲವು ವಸ್ತುಗಳ ಮೇಲಿನ ತೆರಿಗೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಜನರಿಗೆ ತೆರಿಗೆ ಹೊರೆ ಬಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಜಿಎಸ್‌ಟಿ ಕ್ರಾಂತಿಕಾರಕ ಬದಲಾವಣೆಯಿಂದ ಮಧ್ಯಮ ವರ್ಗದ ಜನರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವ ಜನತೆಗೆ ಪ್ರಧಾನಿ ಮೋದಿ ದೊಡ್ಡ ಉಡುಗೊರೆ ಘೋಷಿಸಿದ್ದಾರೆ. ಯುವಕರಿಗೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ವಿಕಸಿತ ಭಾರತ ರೋಜ್ಗಾರ್ ಯೋಜನೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಘೋಷಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular