HomeLatest NewsBREAKING : UG-CET 'ಛಾಯ್ಸ್' ದಾಖಲಿಸಲು ಅವಧಿ ವಿಸ್ತರಣೆ : ಅಭ್ಯರ್ಥಿಗಳಿಗೆ 'KEA' ಮುಖ್ಯ ಮಾಹಿತಿ

BREAKING : UG-CET ‘ಛಾಯ್ಸ್’ ದಾಖಲಿಸಲು ಅವಧಿ ವಿಸ್ತರಣೆ : ಅಭ್ಯರ್ಥಿಗಳಿಗೆ ‘KEA’ ಮುಖ್ಯ ಮಾಹಿತಿ

ಬೆಂಗಳೂರು : UGCET/UGNEET-25: ಈ ಕೋರ್ಸ್ ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಛಾಯ್ಸ್ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಪ್ಪದೆ ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿಗೆ ಪ್ರವೇಶ ಪಡೆಯಲು ಕೊನೆ ಅವಕಾಶ ನೀಡಲಾಗಿದೆ.

ಎಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ್-ಡಿ, ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್, ಬಿ ಎಸ್ ಸಿ ನರ್ಸಿಂಗ್, ಹೋಮಿಯೋಪಥಿ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರು ಛಾಯ್ಸ್ ದಾಖಲಿಸಲು ಆಗಸ್ಟ್ 14ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ.
ಶುಲ್ಕ ಪಾವತಿಗೆ ಆಗಸ್ಟ್ 14ರಂದು ಸಂಜೆ 4ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 15 ಕೊನೆ ದಿನ. ಈ ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ. ದಿನಾಂಕ ಕೂಡ ವಿಸ್ತರಿಸುವುದಿಲ್ಲ.

UGNEET-25 ಆ.14ರಿಂದ ಛಾಯ್ಸ್ ದಾಖಲು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್ ದಾಖಲಿಸಲು ಆಗಸ್ಟ್ 14ರಂದು ಮಧ್ಯಾಹ್ನ 1 ಗಂಟೆಯಿಂದ ಲಿಂಕ್ ತೆರೆಯಲಾಗುವುದು. ಆಗಸ್ಟ್ 16ರವರೆಗೆ ಛಾಯ್ಸ್ ದಾಖಲಿಸಬಹುದು. ಶುಲ್ಕ ಪಾವತಿಸಲು ಆಗಸ್ಟ್ 18 ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 19 ಕೊನೆ ದಿನ.
ಛಾಯ್ಸ್-1 ಆಯ್ಕೆ ಮಾಡಿದವರು ಆನ್ ಲೈನ್ ನಲ್ಲಿ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಎಲ್ಲ ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.

ಈ ಬಾರಿ ಮೂಲ ದಾಖಲೆಗಳ ಪರಿಶೀಲನೆ ಕಾಲೇಜು ಹಂತದಲ್ಲೇ ಆಗುತ್ತದೆ. ಹೀಗಾಗಿ ಕ್ಲೇಮ್ ಪ್ರಕಾರ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ದಾಖಲೆಗಳು ಸರಿ ಇವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕಾಲೇಜುಗಳಿಗೂ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular