ಬೆಂಗಳೂರು: ಬೆಂಗಳೂರುನಲ್ಲಿ ಆಗಸ್ಟ್ 1ರಿಂದ ಆಟೋ ಮೀಟರ್ ದರ ಏರಿಕೆ ಆಗಿದೆ. ಆದರೂ ಈವರೆಗೆ ಯಾವುದೇ ಆತೋದಲ್ಲೂ ಹೊಸ ದರ ಜಾರಿಯಾಗಿಲ್ಲ. ಹಳೆಯ ಮೀಟರ್ ನಲ್ಲೇ ದುಪ್ಪಟ್ಟು ದರ ಪಡೆಯುತ್ತಿದ್ದು, ಇದಕ್ಕೆ ಕಾರಣ ಆಟ್ ಮೀಟರ್ ಕಂಪನಿಗಳ ದುಪ್ಪಟ್ಟು ದರ ವಸೂಲಿಯಂತೆ.
ಇದರ್ಂದಾಗಿ ಪ್ರಯಾಣಿಕರಿಗೆ ಹೊಸ ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ ಎರಡು ಕಿ.ಮೀಗೆ ಕನಿಷ್ಠ 30ರೂ ಇದ್ದ ದರವನ್ನು 36ರೂಗೆ ಪ್ರತಿ ಕಿ.ಮೀ 15ರೂ ಇದ್ದ ದರವನ್ನು 18 ರೂ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ದರ ಏರಿಕೆಯಾಗಿ 12 ದಿನಗಳು ಕಳೆದರೂ ಆಟೋಗಳಲ್ಲಿ ಹೊಸ ಮೀಟರ್ ದರ ಅಳವಡಿಕೆ ಆಗಿಲ್ಲ.
ಇದಕ್ಕೆ ಪ್ರಮುಖ ಕಾರಣ ಆಟೋ ಮೀಟರ್ ತಯಾರಿಕೆ ಕಂಪನಿಗಳು ರೀ ಕ್ಯಾಲಿಬ್ರೇಷನ್ ಮಾಡಲು ಆಟೋ ಚಾಲಕರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡಲು ಮುಂದಾಗಿದ್ದಾರೆ. ಹೊಸ ಮೀಟರ್ ದರ ರೀ ಕ್ಯಾಲಿಬ್ರೇಶನ್ ಮಾಡಲು ಕೇವಲ 150 ರಿಂದ 400 ರೂ ಪಡೆಯಲು ಮುಂದಾಗಿದ್ದರೆ, ಇತ್ತ ಆಟೋ ಮೀಟರ್ ತಯಾರಿಕೆ ಕಂಪನಿಗಳು ಮಾತ್ರ 900ರಿಂದ 1000 ರೂ ವರೆಗೂ ಹಣವನ್ನೂ ಕೇಳುತ್ತಿದ್ದಾರೆ. ಇದರಿಂದ ಆಟೋ ಚಾಲಕರು ಹೊಸ ಮೀಟರ್ ದರವನ್ನು ಬದಲಾಯಿಸಿಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ಆಟ್ ಚಾಲಕರು ಮೀಟರ್ ಹಾಕದೆಯೇ ಮೀಟರ್ ದರ ಹೆಚ್ಚಳವಾಗಿದೆ ಎಂದು ಹೇಳುತ್ತಾ ಪ್ರಯಾಣಿಕರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದರಿಂದ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.