HomeLatest NewsBIG NEWS : ಗಣಪತಿ ವಿಸರ್ಜನೆಗೆ ತೆಪ್ಪ ಬಳಕೆ ಮಾಡಿದ್ರೆ ‘ಲೈಫ್ ಜಾಕೆಟ್’ ಕಡ್ಡಾಯ :...

BIG NEWS : ಗಣಪತಿ ವಿಸರ್ಜನೆಗೆ ತೆಪ್ಪ ಬಳಕೆ ಮಾಡಿದ್ರೆ ‘ಲೈಫ್ ಜಾಕೆಟ್’ ಕಡ್ಡಾಯ : ಜಿಲ್ಲಾಧಿಕಾರಿ ಆದೇಶ

ಶಿವಮೊಗ್ಗ : ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಆ.27 ರಂದು ನಡೆಯಲಿರುವ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಿದ್ದು, ನದಿ/ಕೆರೆಗಳು/ಹಿನ್ನೀರು ಪ್ರದೇಶಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ತೆಪ್ಪ ಬಳಕೆ ಮಾಡಿದಲ್ಲಿ ಕಡ್ಡಾಯವಾಗಿ 3-4 ಜನರಿಗೆ ಮಾತ್ರ ಅವಕಾಶವಿದ್ದು, ಲೈಫ್ ಜಾಕೆಟ್, ನುರಿತ ಈಜುಗಾರರು ಇರುವಂತೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ ವಿವಿಧ ದಿನಾಂಕಗಳAದು ವಿಸರ್ಜನೆಯನ್ನು ಮೆರವಣೆಗೆ ಮೂಲಕ ನದಿ/ಕೆರೆಗಳು/ಹಿನ್ನೀರು ಪ್ರದೇಶಗಳಲ್ಲಿ ವಿಸರ್ಜನೆ ಮಾಲಿದ್ದು, ಈ ಹಿಂದೆ ಶಿವಮೊಗ್ಗ ತಾಲ್ಲೂಕು ಹಾಡೋನಹಳ್ಳಿ ಗ್ರಾಮದಲ್ಲಿ ತೆಪ್ಪ ಮಗುಚಿ 12 ಜನ ಸಾವನ್ನಪ್ಪಿದ ದುರ್ಘಟನೆ ಸಂಘವಿಸಿದ್ದು, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಣಪತಿ ವಿಸರ್ಜನೆ ವೇಳೆ ತೆಪ್ಪ ಬಳಕೆ ಮಾಡಿದಲ್ಲಿ ಕೇವಲ 2 ರಿಂದ 3 ಜನ ಮಾತ್ರ ತೆಪ್ಪದ ಮೂಲಕ ಲೈಫ್ ಜಾಕೆಟ್ ಧರಿಸಿಕೊಂಡು ನುರಿತ ಈಜುಗಾರರ ಸಮ್ಮುಖದಲ್ಲಿ ವಿಸರ್ಜನೆ ಮಾಡಬೇಕೆಂದು ಅವರು ಆದೇಶಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular