HomeLatest NewsBIG NEWS : 'ರಿಜಿಸ್ಟ್ರಾರ್ ಪೋಸ್ಟ್',  'ಸ್ಪೀಡ್ ಪೋಸ್ಟ್' ನಲ್ಲಿ ವಿಲೀನ : ರಾಜ್ಯ ಸರ್ಕಾರದಿಂದ...

BIG NEWS : ‘ರಿಜಿಸ್ಟ್ರಾರ್ ಪೋಸ್ಟ್’,  ‘ಸ್ಪೀಡ್ ಪೋಸ್ಟ್’ ನಲ್ಲಿ ವಿಲೀನ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಡಿಜಿಟಲ್ ಡೆಸ್ಕ್ : ರಿಜಿಸ್ಟ್ರಾರ್ ಪೋಸ್ಟನ್ನು ಸ್ಪೀಡ್ ಪೋಸ್ಟ್ ನಲ್ಲಿ ವಿಲೀನಗೊಳಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಭಾರತ ಸರ್ಕಾರದ ಅಂಚೆ ಸಚಿವಾಲಯದ ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ, ಅಂಚೆ ಇಲಾಖೆಯು, ತನ್ನ ಅಂಚೆ ಉತ್ಪನ್ನಗಳ ಸೇವೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅದರಂತೆ, ದಿನಾಂಕ:01.08.2025 ರಿಂದ ನೋಂದಾಯಿತ ಅಂಚೆ ಸೇವೆಯನ್ನು, ಕಾರ್ಯಚರಣೆಯ ದಕ್ಷತೆ, ಟ್ರಾಕಿಂಗ್ ಸಾಮರ್ಥ್ಯ ಮತ್ತು ಗ್ರಾಹಕರ ಅನುಕೂಲತೆಯನ್ನು ಸುಧಾರಣೆಗೊಳಿಸುವುದಕ್ಕಾಗಿ, ಸಂವಹನದ ಅಗತ್ಯತೆಗಳು ಮತ್ತು ತಾಂತ್ರಿಕ ಪ್ರಗತಿಗೆ ಅನುಗುಣವಾಗಿ ಸ್ಪೀಡ್-ಫೋಸ್ಟ್” ಸೇವೆಯಲ್ಲಿ ವಿಲೀನಗೊಳಿಸುತ್ತಿದೆ.

ಆದ್ದರಿಂದ, ಸಚಿವಾಲಯದ ಎಲ್ಲಾ ಇಲಾಖೆಗಳು/ಮಾನ್ಯ ಮುಖ್ಯ ಮಂತ್ರಿಯವರ ಸಚಿವಾಲಯ/ ಮಾನ್ಯ ಸಚಿವರ ಆಪ್ತ ಶಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸಾಮಾನ್ಯ ರವಾನೆ) ಶಾಖೆಗೆ ಕಳುಹಿಸುವ ನೋಂದಾಯಿತ ಅಂಚೆ ಲಕೋಟೆಗಳ ಮೇಲೆ, ಇನ್ನು ಮುಂದೆ ನೋಂದಾಯಿತ ಅಂಚೆ (Register post/RPAD) ಎಂಬುದರ ಬದಲಾಗಿ, ತುರ್ತು ಅಂಚೆ (Speed Post) ಎಂದು ನಮೂದಿಸುವಂತೆ ಈ ಮೂಲಕ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular