HomeLatest NewsSHOCKING: ಮನೆ ದಾರಿ ಬದಲಿಸಿ ನಿರ್ಜನ ಪ್ರದೇಶಕ್ಕೆ ಯುವತಿ ಕರೆದೊಯ್ದು ಆಟೋ ಚಾಲಕನಿಂದ ಅತ್ಯಾಚಾರ

SHOCKING: ಮನೆ ದಾರಿ ಬದಲಿಸಿ ನಿರ್ಜನ ಪ್ರದೇಶಕ್ಕೆ ಯುವತಿ ಕರೆದೊಯ್ದು ಆಟೋ ಚಾಲಕನಿಂದ ಅತ್ಯಾಚಾರ

ಬಂಗಾರಪೇಟೆ: ನಿರ್ಜನ ಪ್ರದೇಶಕ್ಕೆ ಯುವತಿ ಕರೆದೊಯ್ದು ಆಟೋ ಚಾಲಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಪ್ರಕರಣದ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಯುವತಿಯ ಮೇಲೆ ಮರಗಲ್ ನಿವಾಸಿ ಮಹೇಶ(24) ಅತ್ಯಾಚಾರ ಆರೋಪ ಕೇಳಿ ಬಂದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಶುಕ್ರವಾರ ಸಂಜೆ ನರಸಾಪುರದಿಂದ ಬಂಗಾರಪೇಟೆಗೆ ಕಂಪನಿ ಬಸ್ ನಲ್ಲಿ ಆಗಮಿಸಿದ್ದಾರೆ. ಅಲ್ಲಿಂದ ಮನೆಗೆ ತೆರಳುವಾಗ ಮಳೆ ಬರುತ್ತಿದ್ದ ಕಾರಣ ಆಟೋ ಹತ್ತಿದ್ದಾರೆ. ಚಾಲಕ ಮಹೇಶ ಯುವತಿಯ ಮನೆಯ ಕಡೆಗೆ ಹೋಗುವ ರಸ್ತೆ ಬದಲಿಸಿದ್ದಾನೆ. ಬೇರೆ ಮಾರ್ಗದಲ್ಲಿ ಹೋಗಿದ್ದಾನೆ. ಈ ವೇಳೆ ಯುವತಿ ಪ್ರಶ್ನಿಸಿದಾಗ ಈ ದಾರಿಯಲ್ಲಿಯೂ ಮನೆಗೆ ಹೋಗಬಹುದು ಎಂದು ಸುಳ್ಳು ಹೇಳಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಟ್ಟಣದಿಂದ ಎರಡರಿಂದ ಮೂರು ಕಿಲೋಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಅತ್ಯಾಚಾರ ಎಸಗಿ ಅಲ್ಲೇ ಯುವತಿ ಬಿಟ್ಟು ಪರಾರಿಯಾಗಿದ್ದಾನೆ. ಯುವತಿಯ ಮೈಯೆಲ್ಲಾ ಕೆಸರಾಗಿ ತೀವ್ರ ಅಸ್ವಸ್ಥಳಾಗಿ ನಡೆದುಕೊಂಡು ಬಂದಿದ್ದಾಳೆ. ಎದುರಾದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯಿಂದ ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular