ಬೆಂಗಳೂರು: ಕುಖ್ಯಾತ ಕಳ್ಳನ ಜೊತೆ ರೂಂ ಶೇರ್ ಮಾಡಿದ್ದ ಕಾನ್ಸ್ ಟೇಬಲ್ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹೆಚ್.ಆರ್.ಸೋನಾರ್ ಸಸ್ಪೆಂಡ್ ಆದವರು. ಕುಖ್ಯಾತ ಕಳ್ಳ ಬಾಂಬೆ ಸಲೀಂ ಜೊತೆ ರೂಂ ಶೇರ್ ಮಾಡಿದ್ದರು. ಕಳ್ಳ ಬಾಂಬೆ ಸಲೀಂ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕಾನ್ಸ್ಟೇಬಲ್ ಕಳ್ಳಾಟವನ್ನು ಬಾಯ್ಬಿಟ್ಟಿದ್ದಾನೆ.
ಕಾನ್ಸ್ ಟೇಬಲ್ ಸೋನಾವರ್ ಯೂನಿಫಾರ್ಮ್ ಧರಿಸಿ ಸಲೀಂ ಪತ್ನಿಗೆ ವಿಡಿಯೋ ಕಾಲ್ ಮಾಡಿರುವುದು ಸಲೀಂ ಮೊಬೈಲ್ ನಲ್ಲಿ ಪತ್ತೆಯಾಗಿದೆ. ಕತ್ಯವ್ಯಲೋಪ ಆರೋಪದಲ್ಲಿ ಕಾನ್ಸ್ ಟೇಬಲ್ ಸೋನಾವರ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.