HomeLatest Newsರಾಜ್ಯದ 30 ಲಕ್ಷ ರೈತರಿಗೆ ಗುಡ್ ನ್ಯೂಸ್: ಡಿಸೆಂಬರ್ ಒಳಗೆ 2 ಲಕ್ಷ ಜಮೀನಿಗೆ ಪೋಡಿ...

ರಾಜ್ಯದ 30 ಲಕ್ಷ ರೈತರಿಗೆ ಗುಡ್ ನ್ಯೂಸ್: ಡಿಸೆಂಬರ್ ಒಳಗೆ 2 ಲಕ್ಷ ಜಮೀನಿಗೆ ಪೋಡಿ ಗುರಿ

ಬೆಂಗಳೂರು: ರೈತರಿಗೆ ನಮ್ಮ ಸರ್ಕಾರ  ನೀಡಿದ ಸರಳೀಕೃತ ದರ್ಖಾಸ್ತು ಪೋಡಿ ʼನನ್ನ ಭೂಮಿʼ ಗ್ಯಾರಂಟಿ ಅಭಿಯಾನದಡಿ ಕೇವಲ 8 ತಿಂಗಳಲ್ಲಿ 1.09 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಳ್ಳಲಾಗಿದ್ದು, ಡಿಸೆಂಬರ್‌ನೊಳಗೆ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ. ಈ ಮೂಲಕ 30 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ರೈತರಿಗೆ ಸರ್ಕಾರ ನೀಡಿದ ಸರಳೀಕೃತ ದರ್ಖಾಸ್ತು ಪೋಡಿ ನನ್ನ ಭೂಮಿ ಗ್ಯಾರಂಟಿ ಅಭಿಯಾನದಡಿ ಡಿಸೆಂಬರ್ ಒಳಗೆ ಎರಡು ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ. ಹಿಂದಿನ ಎಲ್ಲಾ ಸರ್ಕಾರದ ಅವಧಿಯಲ್ಲಿ ಮೂರು ವರ್ಷದಲ್ಲಿ ಕೇವಲ 5801 ಪ್ರಕರಣಗಳಲ್ಲಿ ರೈತರಿಗೆ ಪೋಡಿ ದುರಸ್ತಿಯಾಗಿತ್ತು. ನಮ್ಮ ಸರ್ಕಾರ 9 ತಿಂಗಳಲ್ಲಿ 1.09 ಲಕ್ಷ ಜಮೀನುಗಳನ್ನು ಅಳತೆಗೆ ತೆಗೆದುಕೊಂಡಿದ್ದು, ಇನ್ನೂ 50ರಿಂದ 70 ಸಾವಿರ ಪೋಡಿ ಪ್ರಕರಣಗಳು ದಾಖಲಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular