ಬೆಂಗಳೂರು: ವಿದೇಶಕ್ಕೆ ತೆರಳುವವರಿಗೆ ನಕಲಿ ಮೆಡಿಕಲ್ ಸರ್ಟಿಫಿಕೇಟ್ ನೀಡುತ್ತಿದ್ದ ದೂರುನ ಮೇರೆಗೆ ಬೆಂಗಳೂರಿನ ಅಸ್ತ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ಕರ್ನಾಟಕ ವೈದ್ಯಕೀಯ ಪರಿಷತ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೆಡಿಕಲ್ ಕೌನ್ಸಿಲ್ ನಿಯಮ ಉಲ್ಲಂಘನೆ ಹಾಗೂ ವೀಸಾ ಹಗರಣ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಸ್ತ ಡಯಾಗ್ನೋಸ್ಟಿಕ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾತಕ ವೈದ್ಯಕೀಯ ಪರಿಷತ್ ಸದಸ್ಯ ಡಾ.ಭರತ್ ಕುಮಾರ್, ರಾಜಸ್ಥಾನದ ವೈದ್ಯರ ಹೆಸರಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ತೆರೆಯಲಾಗಿದೆ. ಇಲ್ಲಿಂದ ರಕ್ತ ತೆಗೆದುಕೊಂಡು ರಾಜಸ್ಥಾನದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಹೇಳಲಾಗಿದೆ. ದಾಅಳಿ ವೇಳೆ ಯಾವುದೇ ವೈದ್ಯರು ಇರಲಿಲ್ಲ. ರೋಗಿಗಳಾಗಲಿ, ಬಿಲ್ ಆಗಲಿ ಸಿಕ್ಕಿಲ್ಲ. ಸಲಕರಣೆಗಳೂ ಲಭ್ಯವಾಗಿಲ್ಲ. ಆದರೆ ಬೇರೆ ರಾಜ್ಯದ ಜನ ಬಂದು ಇಲ್ಲಿ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ ಎಂದರು. ಈ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.