ಮಧ್ಯ ಕ್ಯಾಲಿಫೋರ್ನಿಯಾದ ನೇವಲ್ ಏರ್ ಸ್ಟೇಷನ್ ಲೆಮೂರ್ ಬಳಿ ಎಫ್ -35 ಫೈಟರ್ ಜೆಟ್ ಅಪಘಾತಕ್ಕೀಡಾಗಿದೆ ಎಂದು ಅಮೆರಿಕ ನೌಕಾಪಡೆ ಬುಧವಾರ ತಿಳಿಸಿದೆ.
ಪೈಲಟ್ ವಿಮಾನದಿಂದ ಹೊರಬಿದ್ದಿದ್ದು, ಸುರಕ್ಷಿತರಾಗಿದ್ದಾರೆ. ಯಾವುದೇ ಹೆಚ್ಚುವರಿ ಸಿಬ್ಬಂದಿ ಗಾಯಗೊಂಡಿಲ್ಲ” ಎಂದು ಎನ್ಎಎಸ್ ಲೆಮೂರ್ ಹೇಳಿಕೆಯಲ್ಲಿ ತಿಳಿಸಿದೆ.
ಅಪಘಾತದ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸಲಾಗಿಲ್ಲ. ಅಪಘಾತದ ಕಾರಣ ತನಿಖೆಯಲ್ಲಿದೆ ಎಂದು ಹೇಳಿಕೆ ತಿಳಿಸಿದೆ.

