ಬೆಂಗಳೂರು: ಮಾವ-ಅಳಿಯನ ನಡುವೆ ಜಗಳ ಆರಂಭವಾಗಿ ಕಾನ್ಸ್ ಟೇಬಲ್ ಓರ್ವರಿಗೆ ಇರಿದಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ವಾಲ್ಮೀಕಿ ನಗರದಲ್ಲಿ ನಡೆದಿದೆ.
ಅಳಿಯ ತಬ್ರೇಜ್ ಹಾಗೂ ಮಾವ ಶಫಿವುಲ್ಲಾ ನಡುವೆ ಜಗಳ ಆರಂಭವಾಗಿತ್ತು. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಆರೋಪಿ ತಬ್ರೇಜ್ ಪಾಷಾ, ಮಾವ ಶಫಿವುಲ್ಲಾ ಜೊತೆ ಗಲಾಟೆ ಮಾಡುತ್ತಿದ್ದ. ಶಫಿವುಲ್ಲಾ ತನ್ನ ಮಗಳಿಗೆ ಬೇರೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದೇ ಕಾರಣಕ್ಕೆ ಮಾವನ ಜೊತೆ ಜಗಳ ಮಾಡಿದ್ದ. ಬಾಟಲ್ ನಿಂದ ಮಾವ ಹಾಗೂ ಅತ್ತೆಯ ತಲೆಗೆ ಹೊಡೆದಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದರು.
ಕೈಲಿದ್ದ ಡ್ಯಾಗರ್ ನಿಂದ ಕಾನ್ಸ್ ಟೇಬಲ್ ಸಂತೋಷ್ ಅವರಿಗೆ ತಬ್ರೇಜ್ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ ಟೇಬಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.