HomeLatest NewsSHOCKING : ಬೆಂಗಳೂರಲ್ಲಿ 'ಭೀಮನ ಅಮಾವಾಸ್ಯೆ' ದಿನವೇ ಪತಿ ಜೊತೆ ಜಗಳ : 5...

SHOCKING : ಬೆಂಗಳೂರಲ್ಲಿ ‘ಭೀಮನ ಅಮಾವಾಸ್ಯೆ’ ದಿನವೇ ಪತಿ ಜೊತೆ ಜಗಳ : 5 ವರ್ಷದ ಮಗಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನ.!

ಬೆಂಗಳೂರು : ಭೀಮನ ಅಮಾವಾಸ್ಯೆ ದಿನವೇ ಪತಿ-ಪತ್ನಿ ನಡುವೆ ಕಲಹ ನಡೆದು 5 ವರ್ಷದ ಮಗಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಉತ್ತರ ಜಿಲ್ಲೆಯ ಕೆಜಿ ಲಕ್ಕೇನಹಳ್ಳಿಯಲ್ಲಿ ನಡೆದಿದೆ.

ಪತಿ ಜಯರಾಮ್ ಹಾಗೂ ಪತ್ನಿ ಮಹಾಲಕ್ಷ್ಮಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗಳಿಗೆ 5 ವರ್ಷದ ಮಗಳು ಕೂಡ ಇದ್ದಳು. ಆಗಾದ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇಂದು ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮಹಾಲಕ್ಷ್ಮಿ ತನ್ನ ಗಂಡನ ಜೊತೆ ಜಗಳ ಮಾಡಿಕೊಂಡು ರೂಮ್ ಗೆ 5 ವರ್ಷದ ಮಗಳು ಸಿರಿ ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದೃಷ್ಟವಶಾತ್ ಮಹಾಲಕ್ಷ್ಮಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ 5 ವರ್ಷದ ಮಗಳು ಮೃತಪಟ್ಟಿದ್ದಾಳೆ. ಪತಿ ಜಯರಾಮ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular