HomeLatest NewsSHOCKING : ಬೆಂಗಳೂರಿನಲ್ಲಿ 'ಗರ್ಭಿಣಿ' ಅನುಮಾನಾಸ್ಪದ ಸಾವು : ಪತ್ನಿ ಶವದ ಜೊತೆ 2 ದಿನ...

SHOCKING : ಬೆಂಗಳೂರಿನಲ್ಲಿ ‘ಗರ್ಭಿಣಿ’ ಅನುಮಾನಾಸ್ಪದ ಸಾವು : ಪತ್ನಿ ಶವದ ಜೊತೆ 2 ದಿನ ಕಾಲ ಕಳೆದ ಪತಿ.!

ಬೆಂಗಳೂರು : ಬೆಂಗಳೂರಿನಲ್ಲಿ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿಯೋರ್ವ ಪತ್ನಿ ಶವದ ಜೊತೆ 2 ದಿನ ಕಾಲ ಕಳೆದಿದ್ದಾನೆ.

ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಈ ಘಟನೆ ನಡೆದಿದೆ.ಮೃತ ಮಹಿಳೆಯನ್ನು ಸುಮನಾ (22) ಎಂದು ಗುರುತಿಸಲಾಗಿದೆ. ಪತಿ ಶಿವಂ ಜೊತೆ ಈಕೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸುಮನಾ ಕಳೆದ 3 ದಿನಗಳ ಹಿಂದಷ್ಟೇ ಮನೆಯಲ್ಲಿ ಮೃತಪಟ್ಟಿದ್ದರು . ಸುಮನಾ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಶವದ ದುರ್ವಾಸನೆ ಬಂದಾಗ ಸ್ಥಳೀಯರು ಗಮನಿಸಿದ್ದು, ನಂತರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಘಾತಕಾರಿ ವಿಚಾರ ಅಂದರೆ ಪತ್ನಿ ಮೃತದೇಹದ ಜೊತೆ ಈತ 2 ದಿನ ಕಾಲ ಕಳೆದಿದ್ದಾನೆ. ಪತ್ನಿ ಮೃತಪಟ್ಟ ಮೊದಲನೇ ದಿನ ಈತ ಕೆಲಸಕ್ಕೆ ಹೋಗಿದ್ದಾನೆ. 2 ನೇ ದಿನ ಪತ್ನಿ ಶವದ ಮುಂದೆ ಊಟ ಕೂಡ ಮಾಡಿದ್ದಾನೆ ಎನ್ನಲಾಗಿದೆ. ನಂತರ ಅಕ್ಕಪಕ್ಕದ ಮನೆಯವರು ಬಂದು ನೋಡುವಾಗ ಈತ ಎಸ್ಕೇಪ್ ಆಗಿದ್ದಾನೆ.ಸದ್ಯ ಪತಿ ಶಿವಂಗಾಗಿ ಹೆಣ್ಣೂರು ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular