ಗದಗ: ಗದಗ ಜಿಲ್ಲೆಯಲ್ಲಿ ನಡೆದಿದ್ದ ವಿಚಿತ್ರ ಲವ್ ಜಿಹಾದ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ ಮತಾಂತರ ಮಾಡಿದ್ದಾರೆ ಎಂದು ಯುವಕ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇದೀಗ ಈ ಪ್ರಕರಣದಲ್ಲಿ ಯುವಕನ ವಿರುದ್ಧವೇ ಪೋಕ್ಸೋ ಕೇಸ್ ದಾಖಲಾಗಿದೆ.
ಯುವಕ ವಿಶಾಲ್ ಕುಮಾರ್ ತನನ್ನು ಮದುವೆ ನೆಪದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ, ನನ್ನ ಹೆಸರನ್ನೂ ಬದಲಿಸಿದ್ದಾರೆ. ಮುಸ್ಲಿಂ ಯುವತಿಯನ್ನು ಪ್ರೀಟಿಸಿದ್ದಕ್ಕಾಗಿ ಮಸೀದಿಯೊಂದರಲ್ಲಿ ಮುಸ್ಲಿಂ ಯುವತಿಯ ಜೊತೆ ಮದುವೆ ಹೆಸರಲ್ಲಿ ಮತಾಂಅತ್ರ ಮಾಡಿ ವಿರಾಜ್ ಸಾಬ್ ಎಂದು ಹೆಸರು ಬದಲಿಸಿದ್ದಾರೆ ಎಂದು ಆರೋಪಿಸಿ ಶಹಪುರ ಠಾಣೆಯಲ್ಲಿ ದೂರು ನೀಡಿದ್ದ.
ಇದೀಗ ವಿಶಾಲ್ ಕುಮಾರ್ ವಿರುದ್ಧ ಯುವತಿಯೇ ದೂರು ನೀಡಿದ್ದು, ಪೋಕ್ಸೋ ಕೇಸ್ ದಾಖಲಿಸಿದ್ದಾಳೆ. ವಿಶಾಲ್ ಕುಮಾರ್, ತಾನು ೧೭ ವರ್ಷದವಳಿದ್ದಾಗ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಪ್ರೀತಿ-ಪ್ರೇಮ ಎಂದು ಹಿಂದೆ ಬಿದ್ದಿದ್ದ ಎಂದು ದೂರು ದಾಖಲಿಸಿದ್ದಾಳೆ. ಗದಗ ಮಹಿಳಾ ಠಾಣೆಯಲ್ಲಿ ವಿಶಾಲ್ ಕುಮಾರ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.