ಮಂಡ್ಯ: ಬೇಕರಿಯಿಂದ ತಂದಿದ್ದ ಕೇಕ್ ತಿಂದು ಮಗು ಅಸ್ವಸ್ಥವಾಗಿದೆ. ಫುಡ್ ಪಾಯ್ಸನ್ ನಿಂದ ಮಗು ಅಸ್ವಸ್ಥವಾಗಿದ್ದು, ಪೋಷಕರು ಬೇಕರಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ ಬೇಕರಿಗೆ ಬೀಗ ಜಡಿದಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಘಟನೆ ನಡೆದಿದೆ. ಬೇಕರಿ ಮೇಲೆ ದಾಳಿ ನಡೆಸಲಾಗಿದೆ. ನಾಗಮಂಗಲ ಪಟ್ಟಣದಲ್ಲಿ ಕಾವೇರಿ ಬೇಕರಿಯಲ್ಲಿ ಆನಂದ್ ಎಂಬುವವರು ಕೇಕ್ ತಂದಿದ್ದರು. ಕೇಕ್ ತಿಂದು ಆನಂದ್ ಅವರ ಪುತ್ರಿ ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಫುಡ್ ಪಾಯ್ಸನ್ ನಿಂದ ಮಗು ಅಸ್ವಸ್ಥವಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಬಳಿಕ ಮನೆಗೆ ತಂದಿದ್ದ ಕೇಕ್ ಪರಿಶೀಲಿಸಿದಾಗ ಹುಳಗಳು ಕಂಡು ಬಂದಿವೆ. ಆನಂದ್ ಮತ್ತು ಸ್ನೇಹಿತರು ಬೇಕರಿಗೆ ಹೋಗಿ ಕಿಚನ್ ಪರಿಶೀಲಿಸಿದಾಗ ಅವಧಿ ಮುಗಿದ ಪದಾರ್ಥಗಳಿಂದ ಕೇಕ್ ತಯಾರಿಸುತ್ತಿರುವುದು ಪತ್ತೆಯಾಗಿದೆ. ಆನಂದ ಶಾಕ್ ಆಗಿದ್ದಾರೆ. ಬೇಕರಿ ಮಾಲೀಕ ಮಹೇಶನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಷಯ ತಿಳಿದ ಪುರಸಭೆ ಅಧಿಕಾರಿ, ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಚನ್ ನಲ್ಲಿ ಅವ್ಯವಸ್ಥೆ ಕಂಡು ಬೇಕರಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.