ಮುಂಬೈ : ಮುಂಬೈ ಏರ್ ಪೋರ್ಟ್ ರನ್ ವೇ ನಲ್ಲಿ ಏರ್ ಇಂಡಿಯಾ ವಿಮಾನ ಸ್ಕಿಡ್ ಆಗಿದ್ದು, ಅದೃಷವಶಾತ್ ಭಾರಿ ದುರಂತ ತಪ್ಪಿದೆ.
ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕೊಚ್ಚಿಯಿಂದ ಬಂದ ಏರ್ ಇಂಡಿಯಾ ವಿಮಾನವು ಇಳಿಯುವಾಗ ರನ್ವೇಯಲ್ಲಿ ಇಳಿಯುವಾಗ ಘಟನೆ ನಡೆದಿದೆ. ವಿಮಾನಯಾನ ಸಂಸ್ಥೆಯ ಅಧಿಕೃತ ಹೇಳಿಕೆಯ ಪ್ರಕಾರ ಸುರಿದ ಭಾರಿ ಮಳೆಯಿಂದ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಕೆಳಗಿಳಿಸಿ ತಪಾಸಣೆ ನಡೆಸಲಾಯಿತು. ಜುಲೈ 21, 2025 ರಂದು ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ AI2744 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಭಾರೀ ಮಳೆಯಿಂದ ತೊಂದರೆ ಅನುಭವಿಸಿತು, ಇದರ ಪರಿಣಾಮವಾಗಿ ಟಚ್ಡೌನ್ ನಂತರ ರನ್ವೇ ವಿಹಾರ ನಡೆಯಿತು” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ವಿಮಾನವು ಸುರಕ್ಷಿತವಾಗಿ ಗೇಟ್ಗೆ ತಲುಪಿತು ಮತ್ತು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಇಳಿದಿದ್ದಾರೆ” ಎಂದು ವಕ್ತಾರರು ಹೇಳಿದರು.

