ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜೀಪ್ ಹತ್ತುವಾಗ ಪೊಲೀಸರನ್ನು ತಳ್ಳಿ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಿದ್ದಾನೆ.
ದೇವಪ್ಪ(21) ಪೋಲಿಸ್ ವಶದಿಂದ ತಪ್ಪಿಸಿಕೊಂಡ ಆರೋಪಿಯಾಗಿದ್ದಾನೆ. ಶನಿವಾರ ದೇವಪ್ಪನನ್ನು ಪೊಲೀಸರು ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನಂತರ ಜೀಪ್ ನಲ್ಲಿ ಹತ್ತುವಾಗ ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡು ದೇವಪ್ಪ ಪರಾರಿಯಾಗಿದ್ದಾನೆ.
ಜುಲೈ 18ರಂದು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಐದಬಾವಿದೊಡ್ಡಿ ಗ್ರಾಮದ ದೇವಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕೊಡೆಕಲ್ ಠಾಣೆಯ ಎಎಸ್ಐ ಸಂಗಪ್ಪ ಮತ್ತು ಹೆಡ್ ಕಾನ್ಸ್ಟೇಬಲ್ ಯಲ್ಲಪ್ಪ ಜೊತೆಗೂಡಿ ಆರೋಪಿಯನ್ನು ಸುರಪುರ ನಗರದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ತಪಾಸಣೆ ಮುಗಿದ ನಂತರ ಪೊಲೀಸ್ ವಾಹನ ಹತ್ತುವಾಗ ಪೊಲೀಸರನ್ನು ತಳ್ಳಿ ದೇವಪ್ಪ ಪರಾರಿಯಾಗಿದ್ದಾನೆ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.