ಛತ್ತೀಸ್ ಗಢ: ಛತ್ತೀಸ್ ಗಢದ ಬಲೋದ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ವಿದ್ಯುತ್ ಶಾಕ್ ನೀಡಿ ಮಾವನ ಕೊಲೆ ಮಾಡಿದ್ದು, ಗಾಯಗಳನ್ನು ಮರೆಮಾಡಲು ಅರಿಶಿನ ಬಳಸಿದ್ದಾಳೆ.
ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಬಂಧಿಸಲಾಗಿದೆ. ಹಿರಿಯ ವ್ಯಕ್ತಿಯನ್ನು ಇಬ್ಬರೂ ವಿದ್ಯುತ್ ಆಘಾತ ನೀಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯುತ್ ತಂತಿಯಿಂದ ಸುತ್ತುವ ಲೋಹದ ರಾಡ್ ಬಳಸಿ ಕೊಲೆ ಮಾಡಲು ಇಬ್ಬರೂ ಯೋಜಿಸಿದ್ದರು. ಅದನ್ನು ವಿದ್ಯುತ್ ಮೂಲಕ್ಕೆ ಸಂಪರ್ಕಿಸಲಾಗಿತ್ತು. ವಿದ್ಯುತ್ ಆಘಾತಕ್ಕೊಳಗಾಗುವುದನ್ನು ತಪ್ಪಿಸಲು ಮಹಿಳೆ ಎಲೆಕ್ಟ್ರಿಷಿಯನ್ ಕೈಗವಸುಗಳನ್ನು ಧರಿಸಿದ್ದರು, ಆದರೆ ಆಕೆಯ ಸಂಗಾತಿ ಈ ಕೃತ್ಯ ಎಸಗಿದ್ದರು.
ಆ ಸಮಯದಲ್ಲಿ ನಿದ್ದೆ ಮಾಡುತ್ತಿದ್ದ ಮತ್ತು ಕುಡಿದ ಅಮಲಿನಲ್ಲಿದ್ದ ಮಾವನ ದೇಹದ ವಿವಿಧ ಭಾಗಗಳಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಗಾಯಗಾಳಿದ್ದವು. ಘಟನೆಯ ನಂತರ, ಸುಟ್ಟ ಗಾಯಗಳು ಮತ್ತು ಇತರ ಗಾಯಗಳಿಗೆ ಮಹಿಳೆ ಅರಿಶಿನ ಮತ್ತು ರೋಸ್ ವಾಟರ್ ಹಚ್ಚಿ ಅವುಗಳನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡಿದ್ದಾಳೆ. ಸೈಕಲ್‌ನಿಂದ ಬಿದ್ದು ಸಾವು ಸಂಭವಿಸಿದೆ ಎಂದು ಅವರು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಅಂತ್ಯಕ್ರಿಯೆಗೆ ತಯಾರಿ ನಡೆಸುವಾಗ ಗ್ರಾಮಸ್ಥರು ಅಸಹಜವಾಗಿದ್ದ ಗಾಯಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯು ವಿದ್ಯುತ್ ಆಘಾತ ಸಾವಿಗೆ ಕಾರಣವೆಂದು ದೃಢಪಡಿಸಿದೆ. ಮಹಿಳೆ ಮತ್ತು ಮೃತರ ನಡುವೆ ನಡೆಯುತ್ತಿರುವ ಕೌಟುಂಬಿಕ ಕಲಹದಿಂದ ಕೃತ್ಯವೆಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.