ಜು. 21, 22 ರಂದು ದಾವಣಗೆರೆಯಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನ: ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಪಂಚಪೀಠದ ಶ್ರೀಗಳು ಭಾಗಿ

ದಾವಣಗೆರೆ: ದಾವಣಗೆರೆಯಲ್ಲಿ ಜು. 21, 22 ರಂದು ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನ ನಡೆಯಲಿದೆ. 40 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಪಂಚಪೀಠಾಧೀಶ್ವರರು ಭಾಗವಹಿಸಲಿದ್ದಾರೆ.

1967 ರಲ್ಲಿ ಮುಕ್ತಿಮಂದಿರದಲ್ಲಿ ಪಂಚಪೀಠಗಳ ಶ್ರೀಗಳು ಕೂಡಿದ್ದರು. ಈಗ ರೇಣುಕ ಮಂದಿರದಲ್ಲಿ ಒಂದೇ ವೇದಿಕೆಯಲ್ಲಿ ಪಂಚಪೀಠಗಳ ಶ್ರೀಗಳು ಭಾಗವಹಿಸಲಿದ್ದಾರೆ. ರಂಭಾಪುರಿ ಪೀಠ, ಉಜ್ಜಯಿನಿ, ಕೇದಾರ, ಕಾಶಿ, ಶ್ರೀಶೈಲ ಪೀಠದ ಶ್ರೀಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶೃಂಗ ಸಮ್ಮೇಳನದಲ್ಲಿ ದೇಶದೆಲ್ಲೆಡೆಯಿಂದ 500ಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದಾರೆ. ಪಂಚಪೀಠದ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶೃಂಗ ಸಮ್ಮೇಳನ ನಡೆಯಲಿದ್ದು, ಪೀಠಾಚಾರ್ಯರು ಮತ್ತು ಶಿವಾಚಾರ್ಯರನ್ನು ಒಂದೆಡೆ ಸೇರಿಸಿ ಜಾಗೃತಿ ಮೂಡಿಸಲಾಗುವುದು. ವೀರಶೈವ ಲಿಂಗಾಯಿತ ಸಮುದಾಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಾತಿಗಣತಿಯ ವೇಳೆ ವೀರಶೈವ ಲಿಂಗಾಯತ ಎಂದು ಬರೆಸುವಂತೆ ಜಾಗೃತಿ ಮೂಡಿಸಲು ವೀರಶೈವ ಲಿಂಗಾಯಿತ ಮಹಾಸಭಾ ಕಾರ್ಯಕ್ರಮ ಹಮ್ಮಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read