ದುನಿಯಾ ಡಿಜಿಟಲ್ ಡೆಸ್ಕ್ : 40 % ಭಾರತೀಯರು ಹೋದಲ್ಲೇ ವಸ್ತುಗಳನ್ನು ಮರೆತು ಬರುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಹೌದು,.ಶೇ. 40ಕ್ಕಿಂತಲೂ ಹೆಚ್ಚು ಭಾರತೀಯರು ತಾವು ಹೋದ ಕಡೆ ವಸ್ತುಗಳನ್ನ ಮರೆತು ಬರುತ್ತಾರಂತೆ. ಬಟ್ಟೆ, ಆಭರಣ, ಕನ್ನಡಕ, ಪರ್ಸ್, ಚಾರ್ಜರ್, ಇಯರ್ಫೋನ್, ಮತ್ತಿತರ ವಸ್ತುಗಳನ್ನು ಮರೆತು ಬರುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಶೇ. 42ರಷ್ಟು ಭಾರತೀಯ ಪ್ರಯಾಣಿಕರು ಸಾಕ್ಸ್, ಶರ್ಟ್ ಮರೆತರೆ. ಶೇ. 37ರಷ್ಟು ಜನರು ಚಾರ್ಜರ್, ಇಯರ್ ಫೋನ್ ಮತ್ತಿತರರ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೂ ಶೇ. 30ರಷ್ಟು ಜನ ಕನ್ನಡಕಗಳನ್ನುಮರೆಯುತ್ತಾರೆ. ಶೇ. 17 ಜನ ಪಾಸ್ ಪೋರ್ಟ್, ಐಡಿ, ಶೇ. 15 ಹಾಗೂ 13 % ಜನ ಕೃತಕ ಹಲ್ಲುಗಳ ಸೆಟ್ ಮರೆತುಬರುತ್ತಾರೆ ಎಂದು ಬುಕಿಂಗ್ ಡಾಟ್ ಕಾಮ್ ಮತ್ತು ಯುಗೌ ಕಂಪನಿಗಳು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
TAGGED:ಅಧ್ಯಯನ