ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಕನಿಷ್ಠ ಒಂದು ವರ್ಷ ಜೈಲಿನಲ್ಲಿ ಇರುವುದು ಖಚಿತವಾಗಿದೆ. ರನ್ಯಾ ರಾವ್ ಸೇರಿದಂತೆ ಮೂವರ ವಿರುದ್ಧ ಡಿ.ಆರ್.ಐ. ಹೊರಿಸಿದ್ದ ಕಾಫಿ ಪೋಸಾ ಕಾಯ್ದೆಯನ್ನು ಸಲಹಾ ಮಂಡಳಿ ಅನುಮೋದಿಸಿದ್ದು, ಅವರಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎಂದು ಹೇಳಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಈ ಪ್ರಕರಣದಲ್ಲಿ ರನ್ಯಾ, ತರುಣ್, ಸಾಹಿಲ್ ಸಕಾರಿಯ ಜೈನ್ ಅವರನ್ನು ಕಾಫಿ ಪೋಸಾ ಕಾಯ್ದೆ(ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆಯಡಿ) ಬಂಧಿಸಿದ್ದು, ಈ ಬಂಧನವನ್ನು ಕಾಫಿ ಪೋಸಾ ಸಲಹಾ ಮಂಡಳಿ ಅನುಮೋದಿಸಿದೆ. ಹೀಗಾಗಿ ಮೂವರು ಆರೋಪಿಗಳಿಗೆ ಕನಿಷ್ಠ ಒಂದು ವರ್ಷ ಜಾಮೀನು ಸಿಗುವುದಿಲ್ಲ.