ಮಂಗಳವಾರ ರಾತ್ರಿ ಪಾಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ (6E 2482) ಅಪಘಾತದಿಂದ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ವಿಮಾನವು ಲ್ಯಾಂಡ್ ಆಗುವಾಗ ರನ್ವೇಯಲ್ಲಿ ಗೊತ್ತುಪಡಿಸಿದ ಟಚ್ಡೌನ್ ಪಾಯಿಂಟ್ಗಿಂತ ಸ್ವಲ್ಪ ಮುಂದೆ ಇಳಿಯಿತು. ಉಳಿದ ರನ್ವೇ ಉದ್ದವು ವಿಮಾನವನ್ನು ಸುರಕ್ಷಿತ ನಿಲುಗಡೆಗೆ ತರಲು ಸಾಕಾಗುವುದಿಲ್ಲ ಎಂದು ಅರಿತುಕೊಂಡ ಪೈಲಟ್, ತಕ್ಷಣವೇ ವಿಮಾನವನ್ನು ಚಾಣಾಕ್ಷತೆಯಿಂದ ಟೇಕಾಫ್ ಮಾಡಿದ್ದಾರೆ. ನಂತರ ವಿಮಾನ 3 ಸುತ್ತು ಹೊಡೆದು ರಾತ್ರಿ 9 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ವಿಮಾನದಲ್ಲಿದ್ದ ಎಲ್ಲಾ 173 ಪ್ರಯಾಣಿಕರು ಸುರಕ್ಷಿತವಾಗಿದ್ದು, ಅಪಘಾತವನ್ನು ತಡೆಗಟ್ಟುವಲ್ಲಿ ಪೈಲಟ್ನ ಜಾಗರೂಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
TAGGED:ಟೇಕಾಫ್