ತುಮಕೂರು : ಡೆಡ್ಲಿ ಅಪಘಾತಕ್ಕೆ ಪಾದಚಾರಿ ಮಹಿಳೆ ಬಲಿಯಾದ ಘಟನೆ ತುಮಕೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.
ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನಿಲೂಫರ್ (26)ಎಂದು ಗುರುತಿಸಲಾಗಿದೆ.
ಜುಲೈ 14 ರಂದು ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಸವಾರರ ಮೇಲೆ ಹಲವು ಅನುಮಾನಗಳು ಮೂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬೈಕ್ ಸವಾರರ ಬಳಿ ಡ್ಯಾಗರ್ ಇರುವುದು ಪತ್ತೆಯಾಗಿದ್ದು, ಜನ ಸೇರುತ್ತಿದ್ದಂತೆ ಅದನ್ನು ಮೋರಿಗೆ ಎಸೆದು ಸವಾರರು ಎಸ್ಕೇಪ್ ಆಗಿದ್ದಾರೆ.

