ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿಯಾಗಿ ರೈತ ಸಾವನ್ನಪ್ಪಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಯಾನಕ ವೀಡಿಯೋ ವೈರಲ್ ಆಗಿದೆ.
ತೆಲಂಗಾಣದ ಕದ್ದೆಂಪೆದ್ದೂರ್ ಮಂಡಲದ ಮಂಗಲ್ ಸಿಂಗ್ ಥಾಂಡಾದಲ್ಲಿ ಶುಕ್ರವಾರ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನ ಮಂಗಲ್ ಸಿಂಗ್ ಥಾಂಡಾದ ಪೆಲ್ಯಾ ರಾವ್ ಸಿಂಗ್ (47) ಎಂದು ಗುರುತಿಸಲಾಗಿದೆ.
ಜಮೀನನ್ನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಉರುಳಿ ಬಿದ್ದಿದ್ದು, ವಾಹನದ ಸ್ಟೇರಿಂಗ್ ಕುತ್ತಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

