HomeLatest Newsಅನುಮತಿ ಇಲ್ಲದೆ 'ನೈಸ್ ರಸ್ತೆ'ಯಲ್ಲಿ ಏಕಾಏಕಿ ಟೋಲ್ ದರ ಹೆಚ್ಚಳ: ಸರ್ಕಾರದಿಂದ ನೋಟಿಸ್ ಜಾರಿ

ಅನುಮತಿ ಇಲ್ಲದೆ ‘ನೈಸ್ ರಸ್ತೆ’ಯಲ್ಲಿ ಏಕಾಏಕಿ ಟೋಲ್ ದರ ಹೆಚ್ಚಳ: ಸರ್ಕಾರದಿಂದ ನೋಟಿಸ್ ಜಾರಿ

ಬೆಂಗಳೂರು: ಏಕಾಏಕಿ ನೈಸ್ ರಸ್ತೆಗಳ ಟೋಲ್ ದರ ಪರಿಷ್ಕರಿಸಿರುವ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್(ನೈಸ್) ಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.

ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಾಂದ್ರತೆ ಮತ್ತು ಸಂಗ್ರಹಿಸುತ್ತಿರುವ ವಿವರದ ಕುರಿತಾಗಿ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಗೆ ಸೂಚನೆ ನೀಡಲಾಗಿದೆ.

ಸರ್ಕಾರಕ್ಕೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಟೋಲ್ ದರ ಪರಿಷ್ಕರಣೆ ಮಾಡಿರುವದರಿಂದ ನೈಸ್ ಸಂಸ್ಥೆಗೆ ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನೋಟಿಸ್ ಜಾರಿ ಮಾಡಿದ್ದಾರೆ. ಬಿಎಂಐಸಿ ಕಾರಿಡಾರ್ ಯೋಜನೆಯ ಕ್ರಿಯಾ ಒಪ್ಪಂದದ ಆರ್ಟಿಕಲ್ 64ರ ಪ್ರಕಾರ ಸರ್ಕಾರಕ್ಕೆ ಮಾಹಿತಿ ನೀಡಿ ದರ ಪರಿಷ್ಕರಿಸಬೇಕು. ಆದರೆ, ಸರ್ಕಾರಕ್ಕೆ ಸೂಚನೆ ನೀಡಿಲ್ಲ, ನೋಟಿಸ್ ಸ್ವೀಕೃತವಾಗಿಲ್ಲ. ಹೀಗಾಗಿ ಕ್ರಿಯಾ ಒಪ್ಪಂದದ ಪ್ರಕಾರ ಟೋಲ್ ದರ ಪರಿಷ್ಕರಣೆ ಆಗದಿರುವ ಕಾರಣ ದರ ಪರಿಷ್ಕರಣಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿ ನೋಟಿಸ್ ಜಾರಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular