ಪ್ರಯಾಣಿಕರಿಗೆ ಗುಡ್ ನ್ಯೂಸ್: 9 ಆ್ಯಪ್ ಗಳಲ್ಲಿ ನಮ್ಮ ಮೆಟ್ರೋ ಟಿಕೆಟ್ ಲಭ್ಯ

ಬೆಂಗಳೂರು: ನಮ್ಮ ಮೆಟ್ರೋ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ONDC) ನೆಟ್ವರ್ಕ್ ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಚಾಲನೆ ನೀಡಿದೆ.

ಹೈವೇ ಡಿಲೈಟ್, ಮೈಲ್ಸ್ ಅಂಡ್ ಕಿಲೋಮೀಟರ್ಸ್, ಈಸಿ ಮೈ ಟ್ರಿಪ್, ನಮ್ಮ ಯಾತ್ರಿ, ರಾಪಿಡೋ, ಒನ್ ಟಿಕೆಟ್, ರೆಡ್ ಬಸ್, ಟಮಾಕ್, ಯಾತ್ರಾ ಸಿಟಿ ಟ್ರಾವೆಲ್ ಗೈಡ್ ಮೂಲಕ ಕ್ಯೂಆರ್ ಟಿಕೆಟ್ ಪಡೆದುಕೊಳ್ಳಬಹುದು.

ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕಿಂಗ್ ಆಯ್ದ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆ್ಯಪ್, ಬಿಎಂಆರ್ಸಿಎಲ್ ವಾಟ್ಸಾಪ್ ಚಾಟ್ ಬಾಟ್(81055 56677) ಮತ್ತು ಪೇಟಿಎಂ ಆ್ಯಪ್ ಗೆ ಪೂರಕವಾಗಿ ಸೇವೆ ಒದಗಿಸುತ್ತವೆ ಎಂದು ಬಿಎಂಆರ್‌ಸಿಎಲ್ ನಿಂದ ಮಾಹಿತಿ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read