ಪಂಜಾಬ್ : ‘ಪಂಜಾಬ್’ನ ಹೋಶಿಯಾರ್ಪುರದಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನು ಕ್ರೂರವಾಗಿ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ನಡೆದಿದೆ.
ಮನುಷ್ಯನ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಡಬಲ್ ಬ್ಯಾರೆಲ್ ಗನ್ ಹಿಡಿದ ವ್ಯಕ್ತಿ ಮಲಗಿದ್ದ ನಾಯಿಗೆ ಗುಂಡು ಹಾರಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ನಾಯಿ ನೋವಿನಿಂದ ನರಳುತ್ತಿದ್ದರೂ ಅದು ಸಾಯುವರೆಗೆ ಮತ್ತೆ ಆತ ಗುಂಡು ಹಾರಿಸಿದ್ದಾನೆ.
ಪ್ರಾಣಿ ಹಿಂಸೆಯ ಆಘಾತಕಾರಿ ಪ್ರಕರಣವನ್ನು ಪ್ರಾಣಿ ಕಾರ್ಯಕರ್ತರೊಬ್ಬರು “@jaspreetsays” ಎಂಬ X ಖಾತೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಮಾಡಿದ್ದಾರೆ. ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿ ಮತ್ತು ತ್ವರಿತ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
.

