HomeLatest Newsಸ್ನೇಹಿತನ ಪತ್ನಿ ಪ್ರೀತಿಸಿ ಗರ್ಭಿಣಿಯಾದ ಬಳಿಕ ಮದುವೆಗೆ ನಿರಾಕರಣೆ: ಪ್ರಿಯಕರನ ಮನೆ ಎದುರು ಮಹಿಳೆ ಧರಣಿ

ಸ್ನೇಹಿತನ ಪತ್ನಿ ಪ್ರೀತಿಸಿ ಗರ್ಭಿಣಿಯಾದ ಬಳಿಕ ಮದುವೆಗೆ ನಿರಾಕರಣೆ: ಪ್ರಿಯಕರನ ಮನೆ ಎದುರು ಮಹಿಳೆ ಧರಣಿ

ಕೋಲಾರ: ವಿವಾಹಿತೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಲಾಗಿದೆ. ಗರ್ಭಿಣಿಯಾಗಿದ್ದಕ್ಕೆ ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದು, ಪ್ರಿಯಕರ ಅಮರನಾಥ್ ಮನೆಯ ಮುಂದೆ ಮಹಿಳೆ ಧರಣಿ ಕುಳಿತಿದ್ದಾರೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಅಮರನಾಥ್ ಮನೆಯ ಎದುರು ಸಂಯುಕ್ತಾ ಪ್ರತಿಭಟನೆ ನಡೆಸಿದ್ದಾರೆ. ಪತಿ ಹರೀಶ್ ಸ್ನೇಹಿತ ಅಮರನಾಥ್ ನನ್ನು ಸಂಯುಕ್ತಾ ಪ್ರೀತಿಸಿದ್ದರು.

ಬೆಂಗಳೂರಿನಲ್ಲಿ ಇರುವಾಗ ಅಮರನಾಥ್ ಜೊತೆಗೆ ಪ್ರೀತಿ, ಪ್ರೇಮ ಉಂಟಾಗಿತ್ತು. 3 ವರ್ಷದಿಂದ ಪರಸ್ಪರ ಅಮರನಾಥ್ ಮತ್ತು ಸಂಯುಕ್ತಾ ಪ್ರೀತಿಸಿದ್ದರು. ಅಮರನಾಥ್ ಗಾಗಿ ಸಂಯುಕ್ತಾ ಪತಿಯನ್ನು ತೊರೆದು ಬಂದಿದ್ದರು. ಸಂಯುಕ್ತಾ ಐದು ತಿಂಗಳ ಗರ್ಭಿಣಿಯಾದ ಹಿನ್ನೆಲೆ ವಿವಾಹವಾಗಲು ಅಮರನಾಥ್ ನಿರಾಕರಿಸಿದ್ದಾರೆ ಎನ್ನಲಾಗಿದೆ. ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಸಂಯುಕ್ತಾ ಧರಣಿ ಕುಳಿತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular