ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಸರ್ಕಾರಿ ವಲಯದ 12 ಬ್ಯಾಂಕುಗಳಿಂದ 50,000 ಸಿಬ್ಬಂದಿ ನೇಮಕಾತಿ

ನವದೆಹಲಿ: ಸರ್ಕಾರಿ ವಲಯದ ಬ್ಯಾಂಕುಗಳು 50,000 ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿವೆ. ಇವುಗಳಲ್ಲಿ 21 ಸಾವಿರ ಹುದ್ದೆಗಳು ಅಧಿಕಾರಿ ಹಂತದ ಹುದ್ದೆಗಳಾಗಿವೆ. ಉಳಿದವು ಗುಮಾಸ್ತ ಹಾಗೂ ಇತರ ಹುದ್ದೆಗಳಾಗಿವೆ.

ದೇಶದ ಸರ್ಕಾರಿ ಬ್ಯಾಂಕುಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ 20,000 ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಿದೆ. ಇವುಗಳಲ್ಲಿ 505 ಪ್ರೊಬೇಷನರಿ ಅಧಿಕಾರಿಗಳು, 13,455 ಕಿರಿಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಎಸ್.ಬಿ.ಐ. ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಗುರಿಯನ್ನು ಎಸ್‌ಬಿಐ ಹೊಂದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ 5000 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4000 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ. ಅದೇ ರೀತಿ ವಿವಿಧ ಬ್ಯಾಂಕ್ ಗಳು ಹೆಚ್ಚುತ್ತಿರುವ ಅಗತ್ಯತೆ ಪೂರೈಸಲು ಮತ್ತು ವಹಿವಾಟು ವಿಸ್ತರಣೆಗಾಗಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿವೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read