BIG NEWS : 2025-26 ನೇ ಸಾಲಿನ ರಾಜ್ಯದ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ |Best Teacher Award

ಬೆಂಗಳೂರು : ಪ್ರತಿ ವರ್ಷದಂತೆ, 2025-26 ನೇ ಸಾಲಿನ 5ನೇ ಸೆಪ್ಟೆಂಬರ್ 2025 ರ “ಶಿಕ್ಷಕರ ದಿನಾಚರಣೆ” ಅಂಗವಾಗಿ ನೀಡಲಾಗುವ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗಳಿಗೆ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಅಯ್ಕೆ ಮಾಡುವ ಸಂಬಂಧ ಹೊರಡಿಸಲಾಗುತ್ತಿರುವ ಈ ಸುತ್ತೋಲೆಯೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಸದಸ್ಯರ ವಿವರ ಹಾಗೂ ಸಮಿತಿಯ ಕರ್ತವ್ಯಗಳ ಮಾರ್ಗಸೂಚಿಯನ್ನು ಲಗತ್ತಿಸಿ ಕಳುಹಿಸಿಕೊಡಲಾಗಿದೆ.

ಪ್ರತಿ ಜಿಲ್ಲೆಗೆ ನಿಗದಿ ಪಡಿಸಿರುವ ಪ್ರಶಸ್ತಿಗಳ ಸಂಖ್ಯಾ ವಿವರವನ್ನು (ವಲಯವಾರು ವಿಂಗಡಿಸಿರುವ ಸಂಖ್ಯೆಯನ್ನು) ಹಾಗೂ ಜಿಲ್ಲಾ ಪ್ರಶಸ್ತಿಗೆ ತಲಾ ರೂ.5000/- ರಂತೆ ನೀಡಲಾಗುವ ನಗದು ಪುರಸ್ಕಾರವನ್ನು ಮತ್ತು ಆಯ್ಕೆ ಸಮಿತಿಯ ಖರ್ಚು/ವೆಚ್ಚಗಳೆಗಾಗಿ ಪ್ರತಿ ಜಿಲ್ಲೆಗೆ ರೂ.2000/- ರಂತೆ ನೀಡಲಾಗುವ ಸಾದಿಲ್ವಾರು ವೆಚ್ಚವನ್ನು ‘ಅನುಬಂಧ-ಅ’ ರಲ್ಲಿ ವಿವರಿಸಿರುವಂತೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ಬಿಡುಗಡೆ ಮಾಡಲಾಗುತ್ತಿದೆ.

ರಾಜ್ಯದ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲ್ಲೂಕು ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗಾಗಿ ರೂ.20,000/- ಗಳನ್ನು ಮತ್ತು ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಜಿಲ್ಲಾ ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗಾಗಿ ರೂ. 30,000/-ಗಳ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅದರ ವಿವರಗಳನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ “ಅನುಬಂಧ-ಆ” ರಲ್ಲಿ ನೀಡಲಾಗಿದೆ.

ದಿನಾಂಕ: 05.09.2025 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾರ್ಯಕ್ರಮದ ಖರ್ಚುವೆಚ್ಚದ ವಿವರಗಳ ದೃಢೀಕೃತ ಪ್ರತಿಯೊಂದಿಗೆ ವೋಚರ್ಗಳ ಸಹಿತ ಉಪಯೋಗಿತ ಪ್ರಮಾಣ ಪತ್ರವನ್ನು, ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಭಾವ ಚಿತ್ರಗಳು, ಸಿ. ಡಿ. ಪ್ರತಿಗಳೊಂದಿಗೆ ದಿನಾಂಕ: 30.09.2025 ರ ಒಳಗಾಗಿ ನಿಧಿಗಳ ಕಛೇರಿಗೆ ಕಳುಹಿಸಿಕೊಡುವಂತೆ ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read