ಧಾರವಾಡ: ಧಾರಾವಾಡ ಎ ಎಸ್ ಪಿ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗೆಸ್ ಸಮಾವೇಶಕ್ಕೆ ನುಗ್ಗಿ ಏಕಾಏಕಿ ಪ್ರತಿಭಟನೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆಯೇ ಈ ಘಟನೆ ನಡೆದಿತ್ತು. ಇದರಿಂದ ಗರಂ ಆಗಿದ್ದ ಸಿಎಂ ಸಿದ್ದರಾಮಯ್ಯ, ಅಂದು ಭದ್ರತೆ ನಿಯೋಜನೆಗೊಂಡಿದ್ದ ಧಾರವಾಡ ಎ ಎಸ್ ಪಿ ನಾರಾಯಣ ಅವರನ್ನು ವೇದಿಕೆಗೆ ಕರೆದು ಹೊಡೆಯುವ ರೀತಿಯಲ್ಲಿ ಕೈ ಎತ್ತಿದ್ದರು. ಅಲ್ಲದೇ ಸಮಾವೇಶದಲ್ಲಿ ಪ್ರತಿಭಟನೆ ನಡೆದ ವಿಚಾರಕ್ಕೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು.
ಇದೀಗ ಧಾರವಾಡ ಎ ಎಸ್ ಪಿ ನಾರಾಯಣ ಸ್ವಯಂ ನಿವೃತ್ತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದು, ಅಂದು ನಡೆದ ಘಟನೆಯಿಂದ ಅವಮಾನಿತರಾಗಿ ಸ್ವಯಂ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.
ಎ ಎಸ್ ಪಿ ನಾರಾಯಣ ಅವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾರಾಯಣ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.