HomeLatest Newsಜೈಸಲ್ಮೇರ್ ಬಳಿ ಭಾರತ-ಪಾಕ್ ಗಡಿಯಲ್ಲಿ ಇಬ್ಬರ ಶವ ಪತ್ತೆ

ಜೈಸಲ್ಮೇರ್ ಬಳಿ ಭಾರತ-ಪಾಕ್ ಗಡಿಯಲ್ಲಿ ಇಬ್ಬರ ಶವ ಪತ್ತೆ

ಭಾರತ-ಪಾಕಿಸ್ತಾನ ಗಡಿಯಲ್ಲಿ ಜೋಡಿ ಶವ ಪತ್ತೆಯಾಗಿದೆ. ರಾಜಸ್ಥಾನದ ಜೈಸಲ್ಮೇರ್ ಬಳಿ ಮರಳು ದಿಬ್ಬಗಳ ಬಳಿ ಈ ಘಟನೆ ನಡೆದಿದೆ.

ಜೋಡಿ ಶವದಲ್ಲಿ ಒಂದು ಅಪ್ರಾಪ್ತ ಯುವತಿಯ ಶವವಾಗಿದೆ. 6-7 ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಇಬ್ಬರೂ ಪಾಕಿಸ್ತಾನಿ ನಾಗರಿಕರು ಎಂದು ತಿಳಿದುಬಂದಿದೆ.

ಹಸಿವು ಹಾಗೂ ಬಾಯಾರಿಕೆಯಿಂದಾಗಿ ಇಬ್ಬರೂ ಸಾವನ್ನಪ್ಪಿರಬಹುದು. ಆದರೆ ಭಾರತದ ಗಡಿಯೊಳಗೆ ಪ್ರವೇಶಿಸಿದ್ದು ಹೇಗೆ/ ಎಂಬ ಬಗ್ಗೆ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಇಬ್ಬರ ಸಾವಿನ ಹಿಂದೆ ಯಾವುದದಾರೂ ಪಿತೂರಿ ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಸ್ಥಳಯರು ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶವದ ಬಳಿ ಪಾಕಿಸ್ತಾನಿ ಸಿಮ್, ಪಾಕಿಸ್ತಾನಿ ಗುರುತಿನ ಚೀಟಿಗಳು ಪತ್ತೆಯಾಗಿವೆ. ಇಬ್ಬರೂ 20 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ. ಹಸಿವು ಹಾಗೂ ಬಾಯಾರಿಕೆಯಿಂದಾಗಿ ಬಳಲಿ ಇಬ್ಬರು ಮೃತಪಟ್ಟಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಬ್ಬರೂ ಹಿಂದೂಗಳಾಗಿದ್ದು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಂದ ಬೇಸತ್ತು ಭಾರತಕ್ಕೆ ಬಂದಿರಬಹುದು. ಆದರೆ ಗಡಿಬಳಿ ಬಂದು ಮೃತಪಟ್ಟಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular