HomeLatest NewsBIG NEWS: ಮಂತ್ರಾಲಯದಲ್ಲಿ ಆನ್ ಲೈನ್ ಬುಕಿಂಗ್ ಹೆಸರಲ್ಲಿ ವಂಚನೆ: ಕಿಡಿಗೇಡಿಗಳಿಂದ ಭಕ್ತರೊಬ್ಬರಿಗೆ ಮೋಸ

BIG NEWS: ಮಂತ್ರಾಲಯದಲ್ಲಿ ಆನ್ ಲೈನ್ ಬುಕಿಂಗ್ ಹೆಸರಲ್ಲಿ ವಂಚನೆ: ಕಿಡಿಗೇಡಿಗಳಿಂದ ಭಕ್ತರೊಬ್ಬರಿಗೆ ಮೋಸ

ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯದ ಗುರುರಾಯರ ಸನ್ನಿದಿಯಲ್ಲಿಯೂ ಕಿಡಿಗೇಡಿಗಳು ವಂಚನೆ ಕೃತ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಆನ್ ಲೈನ್ ಬುಕಿಂಗ್ ಹೆಸರಲ್ಲಿ ವಂಚಕರು ಭಕ್ತರೊಬ್ಬರಿಗೆ ಮೋಸ ಮಾಡಿದ್ದಾರೆ.

ಮಂತ್ರಾಲಯ ಮಠಕ್ಕೆ ಸೇರಿದ ವಿಜಯೇಂದ್ರ ವಸತಿ ಗೃಹದ ಆನ್ ಲೈನ್ ಹೆಸರಲ್ಲಿ ಓರ್ವ ಭಕ್ತರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷತಾ ಎಂಬುವವರಿಗೆ ಆನ್ ಲೈನ್ ಬುಕ್ಕಿಂಗ್ ಹೆಸರಲ್ಲಿ ಮುಂಗಡವಗೈ 2000 ರೂಪಾವಿ ಜಮೆ ಮಾಡಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡದೇ ವಂಚಿಸಲಾಗಿ೮ದೆ. ಈ ಬಗ್ಗೆ ಭಕ್ತರು ಎಚ್ಚರ ವಹಿಸುವಂತೆ ಮಂತ್ರಾಲಯ ಮಠ ಭಕ್ತರಿಗೆ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂತ್ರಾಲಯ ಮಠದ ಆಡಳಿತ ಮಂಡಳಿ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಮಠದ ಪ್ರತಿ ವಸತಿಗೃಹಗಳ ಬುಕ್ಕಿಂಗ್ ಗೆ wwwsrsmatha.org. ಮೂಲಕ ಮಾತ್ರ ಬುಕ್ಕಿಂಗ್ ಮಾಡಿಕೊಳ್ಳುವಂತೆ ತಿಳಿಸಿದೆ.

ಭಕ್ತರೊಬ್ಬರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಂತ್ರಾಲಯ ಮಠ, ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪ್ರಕರಣವನ್ನು ಆಂಧ್ರದ ಕರ್ನೂಲ್ ಠಾಣೆಗೆ ವರ್ಗಾಯಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular