HomeLatest Newsಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ನಾಳೆಯಿಂದ ಮನೆ ಬಾಗಿಲಿಗೆ ಇ -ಖಾತೆ ಸೌಲಭ್ಯ

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ನಾಳೆಯಿಂದ ಮನೆ ಬಾಗಿಲಿಗೆ ಇ -ಖಾತೆ ಸೌಲಭ್ಯ

ಬೆಂಗಳೂರು: ನಾಗರಿಕರ ಸ್ವತ್ತುಗಳಿಗೆ ಡಿಜಿಟಲ್ ದಾಖಲೆ ನೀಡುವ ಕರಡು ಇ-ಖಾತಾ ಸೌಲಭ್ಯವನ್ನು ಆಸ್ತಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಬಿಬಿಎಂಪಿ ಸಿಬ್ಬಂದಿ ಮತ್ತು ಸ್ವಯಂಸೇವಕರ ಮೂಲಕ ಜುಲೈ 1ರಿಂದ ಆಸ್ತಿ ಮಾಲೀಕರ ಮನೆಗೆ ಕರಡು ಇ- ಖಾತಾ ವಿತರಿಸಲಾಗುವುದು.

ಬ್ಯಾಟರಾಯನಪುರ ಕ್ಷೇತ್ರದ ಸಹಕಾರ ನಗರ ಆಟದ ಮೈದಾನದಲ್ಲಿ ಬಿಬಿಎಂಪಿ ಮತ್ತು ಕಂದಾಯ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಮನೆ ಬಾಗಿಲಿಗೆ ಇ-ಖಾತಾ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಡಿಜಿಟಲ್ ದಾಖಲೆ ವಿತರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಆಸ್ತಿಗಳಿಗೆ ರಕ್ಷಣೆ, ದಾಖಲೆಗಳ ಸುರಕ್ಷತೆ ಗ್ಯಾರಂಟಿಗಾಗಿ ರಾಜ್ಯ ಸರ್ಕಾರ ಇ-ಖಾತಾ ವಿತರಿಸುವ ಯೋಜನೆ ಕೈಗೊಂಡಿದೆ. ಬಿಬಿಎಂಪಿ ವ್ಯಾಪ್ತಿಯ 25 ಲಕ್ಷ ಆಸ್ತಿದಾರರಿಗೆ ಈ ಸೌಲಭ್ಯ ಸಿಗಲಿದೆ. ಈಗಾಗಲೇ 5.5 ಲಕ್ಷ ಆಸ್ತಿದಾರರಿಗೆ ಅಂತಿಮ ಇ- ಖಾತಾ ವಿತರಿಸಿದ್ದು, ಉಳಿದವರಿಗೂ ಅವರ ಮನೆಗಳಿಗೆ ಕರಡು ಇ-ಖಾತಾವನ್ನು 100 ದಿನದಲ್ಲಿ ತಲುಪಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ 4000 ಚದರ ಅಡಿ ವಿಸ್ತೀರ್ಣದ ಸೈಟ್ ನಲ್ಲಿ ಮನೆ ನಿರ್ಮಿಸುವವರಿಗೆ ಆನ್ಲೈನ್ ಮೂಲಕ ನಂಬಿಕೆ ನಕ್ಷೆ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular