ಒಡಿಶಾದ ಪುರಿಯಲ್ಲಿ ನಡೆದ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಬಲಭದ್ರ ದೇವರ ರಥವನ್ನು ಎಳೆಯುವ ಸಂದರ್ಭದಲ್ಲಿ ಭಾರಿ ನೂಕು ನುಗ್ಗಲಾಗಿದ್ದು, 500 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ವರದಿ ತಿಳಿಸಿದೆ.
ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಶಾಸ್ತ್ರೋಕ್ತವಾಗಿ ಎಳೆಯುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ದೇವಾಲಯದ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನೀರು ಮತ್ತು ಗ್ಲೂಕೋಸ್ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಭರವಸೆ ನೀಡಿದ್ದಾರೆ ಎಂದು ಮುಖೇಶ್ ಮಹಾಲಿಂಗ್ ಹೇಳಿದರು. “ಸಾಕಷ್ಟು ವೈದ್ಯಕೀಯ ನೆರವು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾನು ಇಲ್ಲಿದ್ದೇನೆ ಮತ್ತು ಆರೈಕೆಯ ಅಗತ್ಯವಿರುವವರನ್ನು ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡುತ್ತೇನೆ” ಎಂದು ಅವರು ಹೇಳಿದರು.

