HomeLatest Newsಆಸ್ತಿ ಮಾಲೀಕರೇ ಗಮನಿಸಿ…! ಸ್ಥಿರಾಸ್ತಿಗಳ ಮಾರುಕಟ್ಟೆ ದರ ಪರಿಷ್ಕರಣೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಸೂಚನೆ

ಆಸ್ತಿ ಮಾಲೀಕರೇ ಗಮನಿಸಿ…! ಸ್ಥಿರಾಸ್ತಿಗಳ ಮಾರುಕಟ್ಟೆ ದರ ಪರಿಷ್ಕರಣೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಸೂಚನೆ

ಬೆಂಗಳೂರು:  2023-24 ನೇ ಸಾಲಿನ ಶಿವಮೊಗ್ಗ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಭದ್ರಾವತಿ ಉಪ ನೋಂದಣಿ ಕಛೇರಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಭದ್ರಾವತಿ ಉಪ ನೋಂದಣಿ ಕಛೇರಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಉಲ್ಲೇಖ (1) ರನ್ವಯ ಪರಿಷ್ಕರಿಸಿ ಹೊರಡಿಸಿದ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರಿಕೆಯಲ್ಲಿ ಶಿವಮೊಗ್ಗ ಉಪ ನೋಂದಣಿ ಕಛೇರಿಯ ಭಾಗ-III, ಸಂಖ್ಯೆ:446 ಮತ್ತು ಭದ್ರಾವತಿ ಉಪ ನೋಂದಣಿ ಕಛೇರಿಯ ಭಾಗ-III, ಸಂಖ್ಯೆ:443 ನ್ನು ದಿನಾಂಕ:01.10.2023 ರಿಂದ ಜಾರಿಗೆ ಬರುವಂತೆ ದಿನಾಂಕ:30.09.2023 ರಂದು ಪ್ರಕಟಿಸಲಾಗಿತ್ತು. ಸದರಿ ಅಧಿಸೂಚನೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

ನಗರಸಭಾ ಕಾರ್ಯಲಯ ಭದ್ರಾವತಿ ಹಾಗೂ ಶಿವಮೊಗ್ಗ ಕೈಗಾರಿಕಾ ಸಂಘ ಮತ್ತು ಮಾಚೇನಹಳ್ಳಿ ಇಂಡಸ್ಟ್ರೀಸ್ ಅಸೋಸಿಯೇಷನ್ ರವರ ಮನವಿಗಳನ್ವಯ ಪ್ರಸ್ತುತ ಚಾಲ್ತಿಯಲ್ಲಿರುವ ಭದ್ರಾವತಿ ತಾಲ್ಲೂಕು ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿಯಲ್ಲಿ ಕೆಲವು ಇಂಡಸ್ಟ್ರೀಯಲ್ ಪ್ರದೇಶಗಳ ದರ ಮರು ಪರಿಷ್ಕರಿಸಲು ಕೋರಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನವಿಯನ್ನು ಪರಿಶೀಲಿಸಿ, ಕಾರ್ಯದರ್ಶಿಗಳು, ತಾಲ್ಲೂಕು ಮೌಲ್ಯ ಮಾಪನ ಉಪ ಸಮಿತಿ ಭದ್ರಾವತಿ ಇವರು ದಿನಾಂಕ:09-07-2024 ರಂದು ನಡೆದ ಸಭೆಯಲ್ಲಿ ಇಂಡಸ್ಟ್ರೀಯಲ್ ಕೆಲವೊಂದು ಪ್ರದೇಶಗಳ ದರಗಳು ಅವೈಜ್ಞಾನಿಕವಾಗಿ ನಿಗದಿಯಾಗಿದ್ದು, ಸದರಿ ಪ್ರದೇಶಗಳಿಗೆ ನಿಗದಿ ಪಡಿಸಿದ ದರಗಳನ್ನು ಮರು ಪರಿಷ್ಕರಿಸಿ ನಿಗದಿಪಡಿಸುವುದು ಸೂಕ್ತವೆಂದು ತಿಳಿದು ನ್ಯೂನತೆಗಳನ್ನು ಪರಿಷ್ಕರಿಸಿ ದರಗಳನ್ನು ಅನುಮೋದಿಸಿ, ಪ್ರಸ್ತಾವನೆಯನ್ನು ಜಿಲ್ಲಾ ನೋಂದಣಾಧಿಕಾರಿಗಳು, ಶಿವಮೊಗ್ಗ ರವರು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿರುತ್ತಾರೆ.

ಉಲ್ಲೇಖ 2 ರನ್ವಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ರವರು ಸದರಿ ಭದ್ರಾವತಿ ತಾಲ್ಲೂಕು, ಜೇಡಿಕಟ್ಟೆ ಹಾಗೂ ಶಿವಮೊಗ್ಗ ತಾಲ್ಲೂಕು, ನಿದಿಗೆ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ಇಂಡಸ್ಟ್ರಿಯಲ್ ಎರಿಯಾಗಳು ಪರಸ್ಪರ ಹೊಂದಿಕೊಂಡಿರುವ ಪ್ರದೇಶಗಳಾಗಿದ್ದು, ಸಮನಾಂತರ ದರ ನಿಗಧಿಪಡಿಸಲು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು ಶಿವಮೊಗ್ಗ ಮತ್ತು ಉಪ ನೋಂದಣಾಧಿಕಾರಿಗಳು ಭದ್ರಾವತಿ, ಶಿವಮೊಗ್ಗ ಹಾಗೂ ಉಪ ಸಮಿತಿಯ ಅಭಿಪ್ರಾಯ ವರದಿಯನ್ನು ಪರಿಶೀಲಿಸಿ, ದಿನಾಂಕ 06-01-2025 ರ ಸಭೆಯಲ್ಲಿ ಸದಸ್ಯರುಗಳೊಂದಿಗೆ ಚರ್ಚಿಸಿ ಸ್ಥಿರಾಸ್ತಿಗಳ ದರ ಪಟ್ಟಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ಜಿಲ್ಲಾ ನೋಂದಣಾಧಿಕಾರಿಗಳು ಶಿವಮೊಗ್ಗ ರವರು ದಿನಾಂಕ: 28-05-2025 ರ ಪತ್ರದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ಉಪನೋದಣಿ ಕಛೇರಿಗಳ ಇಂಡಸ್ಟ್ರೀಯಲ್ ಏರಿಯಾಗಳು ಪರಸ್ಪರ ಹೊಂದಿಕೊಂಡಿರುವ ಪ್ರದೇಶಗಳಿಗೆ ಮಾರ್ಗಸೂಚಿ ದರಗಳ ನ್ಯೂನತೆಗಳನ್ನು ಪರಿಷ್ಕರಿಸಿ ಅಧಿಸುಚನೆಯನ್ನು ಹೊರಡಿಸಿದ್ದು, ಸದರಿ ನ್ಯೂನತೆಗಳನ್ನು ಸಿವಿಸಿ ನಿಯಮಗಳು 2003 ರನ್ವಯ ತಾಲ್ಲುಕು ಉಪ ಸಮಿತಿಯಲ್ಲಿ ಮಂಡಿಸಿ ಸಾರ್ವಜಿನಕರ ಆಕ್ಷೇಪಣೆಗಳ ಪರೀಶಿಲನೆಯ ನಂತರ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನು (ಹೊಸ ಸೇರ್ಪಡೆ) ಹೊರಡಿಸಲು ದಿನಾಂಕ;17-01-2025 ರಂದು ಶಿವಮೊಗ್ಗ ಮತ್ತು ಭದ್ರಾವತಿ ಉಪನೋಂದಣಾಧಿಕಾರಿಗಳಿಗೆ ಸೂಚಿಸಿರುತ್ತಾರೆ.

ಶಿವಮೊಗ್ಗ ಮತ್ತು ಭದ್ರಾವತಿ ಉಪನೋದಣಿ ಕಛೇರಿಗಳ ಇಂಡಸ್ಟ್ರಿಯಲ್ ಏರಿಯಾಗಳು ಪರಸ್ಪರ ಹೊಂದಿಕೊಂಡಿರುವ ಪ್ರದೇಶಗಳ ತಿದ್ದುಪಡಿ ಪರಿಷ್ಕರಿಸುವ ದರಗಳಿಗೆ ಸಾರ್ವಜಿನಿಕರಿಂದ ಬಾರದ ಇನ್ನಲೆಯಲ್ಲಿ ದಿನಾಂಕ:04-06-2025 ರ ಕೇಂದ್ರ ಮೌಲ್ಯ ಮಾಪನ ಸಮಿತಿಯ ತಿದ್ದುಪಡಿ ಅಂತಿಮ ಅನುಮೋದನೆ ಅಧಿಸೂಚನೆಯನ್ನು (ಹೊಸ ಸೇರ್ಪಡೆ) ಹೊರಡಿಸಲು ತೀರ್ಮಾನದನ್ವಯ ಪ್ರಸ್ತುತ ಕರ್ನಾಟಕ ವಿಶೇಷ ಇ-ರಾಜ್ಯ ಪತ್ರಿಕೆಯಲ್ಲಿ. ಈ ಕೆಳಕಂಡ ಉಪ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular