ಬೆಂಗಳೂರು : ಬೆಂಗಳೂರಲ್ಲಿ ಗಾಂಜಾ ಮಿಶ್ರಿತ ಜೆಲ್ಲಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬ್ಯಾಟರಾಯನಪುರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, 3 ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಂಗಳೂರು ಮೂಲದ ಸ್ನೇಹಿತನ ಮೂಲಕ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಒಂದು ಪ್ಯಾಜ್ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ಇದೆ ಎನ್ನಲಾಗಿದೆ.
ಈ ಜೆಲ್ಲಿ ಚಾಕೊಲೇಟ್ ಬಾಯಿಗೆ ಇಟ್ಟುಕೊಂಡರೆ ಸಾಕು ಜೆಲ್ಲಿ ಕರಗಿ ತಲೆ ಸುತ್ತಿ ಬಹಳ ಕಿಕ್ ಬರುತ್ತದೆ . ಯಾರಿಗೂ ಅನುಮಾನ ಬಾರದ ಹಾಗೆ ಚಾಕೊಲೇಟ್ ರೂಪದಲ್ಲಿ ತಯಾರಿಸಿ ಆರೋಪಿಗಳು ನಗರದ ಹಲವೆಡೆ ಮಾರಾಟ ಮಾಡುತ್ತಿದ್ದರು.
You Might Also Like
TAGGED:ಜೆಲ್ಲಿ