HomeLatest NewsBIG NEWS : ರೈಲ್ವೇ ಪ್ರಯಾಣಿಕರೇ ಗಮನಿಸಿ  : ಜುಲೈ 2 ರಿಂದ 28 ರವರೆಗೆ...

BIG NEWS : ರೈಲ್ವೇ ಪ್ರಯಾಣಿಕರೇ ಗಮನಿಸಿ  : ಜುಲೈ 2 ರಿಂದ 28 ರವರೆಗೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಮಾರ್ಗ ಬದಲಾವಣೆ

ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಲೂಪ್ ಲೈನ್ (ರೋಡ್-3) ಅನ್ನು ಮುಖ್ಯ ಲೈನ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಮತ್ತು OHE ಪೋರ್ಟಲ್‌ಗಳನ್ನು ಸ್ಥಳಾಂತರಿಸುವ ಕಾಮಗಾರಿಯಿಂದಾಗಿ, ಜುಲೈ 2, 2025 ರಿಂದ ಜುಲೈ 28, 2025 ರವರೆಗೆ 27 ದಿನಗಳ ಕಾಲ ಲೂಪ್ ಲೈನ್ ಅನ್ನು ಸ್ಥಗಿತಗೊಳಿಸಲಾಗುವುದು. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಳಗಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ.

1. ರೈಲು ಸಂಖ್ಯೆ 22231 ಕಲಬುರಗಿ – ಎಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ಶುಕ್ರವಾರ ಹೊರತುಪಡಿಸಿ) ಅನಂತಪುರ, ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದೆ.

2. ರೈಲು ಸಂಖ್ಯೆ 20703 ಕಾಚೇಗುಡ – ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ (ಬುಧವಾರ ಹೊರತುಪಡಿಸಿ) ಧರ್ಮಾವರಂ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಪೆನುಕೊಂಡ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3. ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು – ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (ಗುರುವಾರ ಹೊರತುಪಡಿಸಿ) ಯಲಹಂಕ, ಪೆನುಕೊಂಡ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮಾವರಂ ಮತ್ತು ಅನಂತಪುರ ಮಾರ್ಗವಾಗಿ ಸಂಚರಿಸಲಿದೆ.

ಮಾರ್ಗ ಬದಲಾವಣೆಯ ಅವಧಿಯಲ್ಲಿ ಮೇಲೆ ತಿಳಿಸಿದ ಯಾವುದೇ ರೈಲುಗಳ ನಿಲುಗಡೆಗಳನ್ನು ಬಿಟ್ಟುಬಿಡುವುದಿಲ್ಲ. ಎಲ್ಲಾ ನಿಗದಿತ ನಿಲುಗಡೆಗಳನ್ನು ನಿರ್ವಹಿಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular