ಡಿಜಿಟಲ್ ಡೆಸ್ಕ್ : 12 ದಿನದ ಯುದ್ಧದ ಬಳಿಕ ಇಸ್ರೇಲ್ ಜೊತೆಗೆ ಇರಾನ್ ಅಧಿಕೃತವಾಗಿ ಕದನ ವಿರಾಮ ಘೋಷಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಸುಮಾರು 12 ದಿನಗಳ ಬಳಿಕ ಇರಾನ್ ಕದನ ವಿರಾಮ ಘೋಷಿಸಿದೆ.
ಇರಾನ್’ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಂಗಳವಾರ ಇಸ್ರೇಲ್ ಜೊತೆಗಿನ ಕದನ ವಿರಾಮದ ಬಗ್ಗೆ ಸುಳಿವು ನೀಡಿದ್ದರು. ಇಸ್ರೇಲ್ ವಿರುದ್ಧ ಬೆಳಿಗ್ಗೆ 4 ಗಂಟೆಯವರೆಗೆ (ಸ್ಥಳೀಯ ಸಮಯ) ಕಾರ್ಯಾಚರಣೆಗಾಗಿ ತಮ್ಮ ಸಶಸ್ತ್ರ ಪಡೆಗಳಿಗೆ ಧನ್ಯವಾದ ಅರ್ಪಿಸಿದರು. ತಮ್ಮ ಸಶಸ್ತ್ರ ಪಡೆಗಳು “ತಮ್ಮ ಕೊನೆಯ ರಕ್ತದ ಹನಿಯವರೆಗೆ” ದೇಶವನ್ನು ರಕ್ಷಿಸಿದವು ಮತ್ತು “ಕೊನೆಯ ಕ್ಷಣದವರೆಗೆ” ಪ್ರತಿಕ್ರಿಯಿಸಿದವು ಎಂದು ಅವರು ಹೇಳಿದ್ದರು.

