HomeLatest Newsಸಾಲಗಾರರಿಗೆ ಗುಡ್ ನ್ಯೂಸ್: ಗೃಹ ಸಾಲಗಳ ಮೇಲಿನ ಬಡ್ಡಿ ದರ ಶೇಕಡ 0.50 ರಷ್ಟು ಇಳಿಸಿದ...

ಸಾಲಗಾರರಿಗೆ ಗುಡ್ ನ್ಯೂಸ್: ಗೃಹ ಸಾಲಗಳ ಮೇಲಿನ ಬಡ್ಡಿ ದರ ಶೇಕಡ 0.50 ರಷ್ಟು ಇಳಿಸಿದ ಎಲ್ಐಸಿ ಹೌಸಿಂಗ್ ಫೈನಾನ್ಸ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಹೊಸ ಗೃಹಸಾಲಗಳ ಮೇಲಿನ ಬಡ್ಡಿ ದರವನ್ನು ಶೇಕಡ 0.50 ರಷ್ಟು ಇಳಿಕೆ ಮಾಡಿದೆ.

ಇನ್ನು ಮುಂದೆ ಗೃಹ ಸಾಲದ ಮೇಲಿನ ಬಡ್ಡಿದರ ಶೇಕಡ 7.50 ರಿಂದ ಆರಂಭವಾಗಲಿದ್ದು, ಜೂನ್ 19ರಿಂದಲೇ ಇದು ಜಾರಿಗೆ ಬಂದಿದೆ.

ಈಗಾಗಲೇ ಅನೇಕ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳು ಬಡ್ಡಿ ದರವನ್ನು ಕಡಿಮೆ ಮಾಡಿವೆ. ಇದೀಗ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕೂಡ ಇದೆ ಕ್ರಮ ಕೈಗೊಂಡಿದೆ. ಮಾಧ್ಯಮ ಪ್ರಮಾಣದ ಆದಾಯ ಇರುವ ಕುಟುಂಬಗಳ ಮನೆ ನಿರ್ಮಿಸುವ ಬಹುದಿನದ ಕನಸುಗಳ ಈಡೇರಿಕೆಗೆ ಬಡ್ಡಿ ದರ ಇಳಿಕೆಯಿಂದ ಅನುಕೂಲವಾಗುತ್ತದೆ. ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ನೀತಿಯನ್ನು ನಾವು ಚಾಚೂತಪ್ಪದೇ ಜಾರಿಗೊಳಿಸಿದ್ದೇವೆ. ಗ್ರಾಹಕರಿಗೆ ನಮ್ಮ ಲಾಭವನ್ನು ದಾಟಿಸುವುದೇ ಗುರಿಯಾಗಿದೆ ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular