ವಿಜಯಪುರ: ಪ್ರಯಾಣಿಕನಂತೆ ಆಟೋ ಏರಿದ ದುಷ್ಕರ್ಮಿಯಿಬ್ಬ ಬ್ಲೇಡಿನಿಂದ ಆಟೋ ಚಾಲಕನ ಕುತ್ತಿಗೆಗೆ ಹೊಡೆದು ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಪ್ರಯಾಣಿಕನ ಸೋಗಿನಲ್ಲಿ ಬಂದ ಅಪಚಿತ ವ್ಯಕ್ತಿ ಆಟೋ ಚಾಲಕನ ಹತ್ಯೆಗೆ ಯತ್ನಿಸಿದ್ದಾನೆ. ವಿಜಯಪುರದ ಬಸವನಬಾಗೇವಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಂಬರೀಶ್ ಕೂಡಗಿ ಹಲ್ಲೆಗೊಳಗಾದ ಆಟೋ ಚಾಲಕ. ಹಲ್ಲೆ ನಡೆಸಿರುವ ಅಪರಿಚಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.