HomeLatest NewsSHOCKING : ರಾಜ್ಯದಲ್ಲಿ ಮತ್ತೊಂದು 'ರಾಕ್ಷಸಿ ಕೃತ್ಯ' : ಬೆಂಗಳೂರಲ್ಲಿ ಹಸುವಿನ ಕೆಚ್ಚಲಿಗೆ ಮಚ್ಚಿನಿಂದ...

SHOCKING : ರಾಜ್ಯದಲ್ಲಿ ಮತ್ತೊಂದು ‘ರಾಕ್ಷಸಿ ಕೃತ್ಯ’ : ಬೆಂಗಳೂರಲ್ಲಿ ಹಸುವಿನ ಕೆಚ್ಚಲಿಗೆ ಮಚ್ಚಿನಿಂದ ಹೊಡೆದು ಹತ್ಯೆ.!

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ಹಸುವಿನ ಕೆಚ್ಚಲಿಗೆ ಮಚ್ಚಿನಿಂದ ಹೊಡೆದು ಹತ್ಯೆ ನಡೆಸಿದ ಘಟನೆ ಯಶವಂತಪುರ ಸಮೀಪದ ಸೂಲಿವಾರದ ಬಳಿ ಶುಕ್ರವಾರ ನಡೆದಿದೆ.

ಮರಿಬಸವಯ್ಯ ಎಂಬುವವರ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ದುಷ್ಕೃತ್ಯ ಮೆರೆದಿದ್ದಾರೆ. ಚುನಾವಣೆ ಸಂಬಂಧ 2 ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿತ್ತು, ಈ ಕಾರಣಕ್ಕೆ ಹಸು ಬಲಿಯಾಗಿದೆ ಎನ್ನಲಾಗಿದೆ.

ನಿನ್ನೆ ಮಧ್ಯಾಾಹ್ನ 3 ಗಂಟೆ ಸುಮಾರಿಗೆ ಹಸು ಮೇಯಲು ಹೋಗಿದ್ದಾಗ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಹಸುವಿನ ರೋಧನೆ ಕೇಳಿ ಓಡಿಬಂದ ಸ್ಥಳೀಯರು ಕೂಡಲೇ ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರ ನೋವಿನಿಂದ ನರಳಿದ ಹಸು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular