HomeLatest Newsತಹಶೀಲ್ದಾರ್ ಸಹಿ ನಕಲು ಮಾಡಿ ಜಮೀನು ವರ್ಗಾವಣೆ: ಕಚೇರಿ ಸಿಬ್ಬಂದಿಯಿಂದಲೇ ವಂಚನೆ

ತಹಶೀಲ್ದಾರ್ ಸಹಿ ನಕಲು ಮಾಡಿ ಜಮೀನು ವರ್ಗಾವಣೆ: ಕಚೇರಿ ಸಿಬ್ಬಂದಿಯಿಂದಲೇ ವಂಚನೆ

ಬೀದರ್: ತಹಶೀಲ್ದಾರ್ ದಿಲ್ ಶಾದ್ ಅಲಿ ಮಹತ್ ಅವರ ಡಿಜಿಟಲ್ ಸಹಿ ನಕಲು ಮಾಡಿ ಒಬ್ಬರ ಹೆಸರಿನಲ್ಲಿದ್ದ ಜಮೀನಿನ ಪಹಣಿಗಳನ್ನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಮಾಡಿದ ಘಟನೆ ನಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೀದರ್ ತಾಲೂಕಿನ ನಂದಗಾಂವ ಗ್ರಾಮದ ಜಗನ್ನಾಥ ಎಂಬವರ ಹೆಸರಿನಲ್ಲಿದ್ದ 8 ಎಕರೆ 13 ಗುಂಟೆ ಜಮೀನನ್ನು ಮೊಹಮದ್ ಇಸ್ಮಾಯಿಲ್ ಎಂಬುವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಸೃಜನ್ ಮತ್ತು ಅಂಬರೀಶ್ ಅವರು ತಹಶೀಲ್ದಾರ್ ದಿಲ್ ಶಾದ್ ಅವರ ಸಹಿಯನ್ನು ನಕಲು ಮಾಡಿ ಜಮೀನು ವರ್ಗಾವಣೆ ಮಾಡಿದ್ದಾರೆ.

ಡಿಜಿಟಲ್ ಸಹಿ ಪ್ರಿಂಟ್ ತೆಗೆದುಕೊಂಡು ನಕಲು ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಅಲ್ಲದೆ, ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular