ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್ ಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ‘CISF‘ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್ ಗೆ ವ್ಯಕ್ತಿಯೋರ್ವ ನುಗ್ಗಲು ಯತ್ನಿಸಿದ್ದಾನೆ.
ಭದ್ರತಾ ಸಿಬ್ಬಂದಿಗೆ ದಾಖಲೆ ತೋರಿಸದೇ ಏಕಾಏಕಿ ನುಗ್ಗಲು ಯತ್ನಿಸಿದ್ದಾನೆ. ‘ಸದದ್ ಮೊಹಮ್ಮದ್ ಬಾಬಾ’ ಎಂಬಾತನನ್ನು ವಶಕ್ಕೆ ಪಡೆದ ಸಿಬ್ಬಂದಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈತ ಜಮ್ಮು-ಕಾಶ್ಮೀರದ ಶ್ರೀನಗರ ಮೂಲದವನು ಎಂದು ಹೇಳಲಾಗಿದೆ.ಈತ ಏಕಾಏಕಿ ನುಗ್ಗಲು ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.