HomeLatest NewsBIG NEWS: ಭಾರತದಲ್ಲಿ ‘ಫಾಲ್ಕನ್ ವಾಣಿಜ್ಯ ವಿಮಾನ’ಗಳ ತಯಾರಿಕೆಗೆ ರಿಲಯನ್ಸ್ ಜತೆ ಒಪ್ಪಂದ

BIG NEWS: ಭಾರತದಲ್ಲಿ ‘ಫಾಲ್ಕನ್ ವಾಣಿಜ್ಯ ವಿಮಾನ’ಗಳ ತಯಾರಿಕೆಗೆ ರಿಲಯನ್ಸ್ ಜತೆ ಒಪ್ಪಂದ

ನವದೆಹಲಿ: ಭಾರತದಲ್ಲಿ ಪಾಲ್ಕನ್ -2000 ವಾಣಿಜ್ಯ ವಿಮಾನಗಳ ತಯಾರಿಕೆಗೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಏರೋಸ್ಟ್ರಕ್ಚರ್ ಹಾಗೂ ಫ್ರಾನ್ಸ್ ಮೂಲದ ವಿಮಾನ ತಯಾರಿಕಾ ಸಂಸ್ಥೆ ಡೆಸಾಲ್ಟ್ ಏವಿಯೇಷನ್ ಸಹಿ ಹಾಕಿವೆ.

2028ರ ವೇಳೆಗೆ ನಾಗಪುರದಲ್ಲಿರುವ ರಿಲಯನ್ಸ್ ಏರೋ ಸ್ಟ್ರಕ್ಚರ್ ಫ್ಯಾಕ್ಟರಿಯಿಂದ ಮೇಡ್ ಇನ್ ಇಂಡಿಯಾ ಪಾಲ್ಕನ್ -2000 ವಿಮಾನಗಳ ಮೊದಲ ಬ್ಯಾಚ್ ಉತ್ಪಾದನೆ ಪೂರ್ಣವಾಗುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಫಾಲ್ಕನ್ ವಿಮಾನಗಳನ್ನು ಫ್ರಾನ್ಸ್ ನಿಂದ ಹೊರಗೆ ತಯಾರಿಸಲಾಗುತ್ತಿದೆ. ರಿಲಯನ್ಸ್ ಸಹಯೋಗದಲ್ಲಿ ವಿಮಾನ ಉತ್ಪಾದನೆಗೆ ಭಾರತದಲ್ಲಿ ಮತ್ತಷ್ಟು ಇಂಜಿನಿಯರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಡೆಸಾಲ್ಟ್ ಏಷಿಯೇಷನ್ ಯೋಜಿಸಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular