HomeLatest NewsBREAKING: ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು

BREAKING: ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲು

ಬೆಂಗಳೂರು: ‘ಸಂಜು ವೆಡ್ಸ್ ಗೀತಾ’ ಚಿತ್ರತಂಡದ ದೂರಿನ ಬೆನ್ನಲ್ಲೇ ನಟಿ ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ‘ಉಪ್ಪಿ ರುಪ್ಪಿ’ ಸಿನಿಮಾದ ನಿರ್ಮಾಪಕರು ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.

‘ಉಪ್ಪಿ ರುಪ್ಪಿ’ ಸಿನಿಮಾಗೆ ಅಡ್ವಾನ್ಸ್ ಹಣ ಪಡೆದು ಚೀತ್ರೀಕರಣಕ್ಕೆ ಬಾರದೇ ನಟಿ ರಚಿತಾ ರಾಮ್ ಸತಾಯಿಸಿದ್ದು, ಇದರಿಂದಾಗಿ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ ಎಂದು ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

8 ವರ್ಷಗಳ ಹಿಂದೆ ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದಲ್ಲಿ ‘ಉಪ್ಪಿ ರುಪ್ಪಿ’ ಚಿತ್ರ ಸಿದ್ಧವಾಗಿತ್ತು. ವಿಜಯಲಕ್ಷ್ಮೀ ಅರಸ್ ನಿರ್ಮಾಣದ ಈ ಸಿನಿಮಾಗೆ ಕೆ.ಮಾದೇಶ್ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ನಟಿಸಲು ರಚಿತಾ ರಾಮ್ 23 ಲಕ್ಷ ಸಂಭಾವನೆಗೆ ಒಪ್ಪಿದ್ದರು. 13 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. 2017ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅಲ್ಲಿಗೆ ಶೂಟಿಂಗ್ ಗೆ ಬರುವುದಾಗಿಯೂ ರಚಿತಾ ರಾಮ್ ಒಪ್ಪಿದ್ದರು. ಅದಕ್ಕಾಗಿ ಅವರಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಶೂಟಿಂಗ್ ಗೆ ಬರುತ್ತೇನೆ ಎಂದು ಹೇಳಿ 15 ದಿನ ಸತಾಯಿಸಿದ್ದರು. ಪ್ರತಿದಿನ ನಿರ್ಮಾಪಕಿ ರಚಿತಾ ರಾಮ್ ಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿ ಕಾದಿದ್ದಾರೆ. ಆದರೂ ರಚಿತಾ ರಾಮ್ ಬಂದಿಲ್ಲ. ಬೇರೆ ದಾರಿಯಿಲ್ಲದೇ ಕೇವಲ ಹೀರೋ ದೃಶ್ಯಗಳನ್ನಷ್ಟೇ ಚಿತ್ರೀಕರಿಸಿಕೊಂಡು ಚಿತ್ರತಂಡ ವಾಪಸ್ ಆಗಿತ್ತು.

ರಚಿತಾ ರಾಮ್ ಅವರಿಂದ ವಿಜಯಲಕ್ಷ್ಮೀ ಅರಸ್ ಒಂದೂವರೆ ಕೋಟಿ ಹಣ ಕಳೆದುಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ಶೂಟಿಂಗ್ ನಲ್ಲಿ ರಚಿತಾ ರಾಮ್ ಕೇವಲ ಒಂದು ದಿನ ಮಾತ್ರ ಬಂದಿದ್ದರು. ರಚಿತಾ ರಾಮ್ ಕಾರಣಕ್ಕೆ ‘ಉಪ್ಪಿ ರುಪ್ಪಿ’ ಚಿತ್ರ ಅರ್ಧಕ್ಕೆ ನಿಂತು ಹೋಯಿತು. ಶೇ. 35ರಷ್ಟು ಮಾತ್ರ ಸಿನಿಮಾ ಸಿದ್ಧವಾಗಿದೆ. ಉಳಿದ ಭಾಗ ಹಾಗೇ ಇದೆ.

ಈ ಬಗ್ಗೆ ನಿರ್ಮಾಪಕಿ ವಿಜಯಲಕ್ಷ್ಮೀ ಅರಸ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ಎರಡು ತಿಂಗಳ ಹಿಂದೆಯೇ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular