HomeLatest NewsBIG NEWS: ಬಸ್ ನಲ್ಲಿ ಕಿಟಕಿ ಸೀಟ್ ಗಾಗಿ ಜಗಳ: ವಿದ್ಯಾರ್ಥಿಗೆ ಚಾಕು ಇರಿದ ಯುವಕರು

BIG NEWS: ಬಸ್ ನಲ್ಲಿ ಕಿಟಕಿ ಸೀಟ್ ಗಾಗಿ ಜಗಳ: ವಿದ್ಯಾರ್ಥಿಗೆ ಚಾಕು ಇರಿದ ಯುವಕರು

ಬೆಳಗಾವಿ: ಸಿಬಿಟಿ ಬಸ್ ನಲ್ಲಿ ಕಿಟಕಿ ಬದಿ ಸೀಟಿಗಾಗಿ ಯುವಕರು ಹಾಗೂ ವಿದ್ಯಾರ್ಥಿ ನಡುವೆ ಗಲಾಟೆ ಆರಂಭವಾಗಿ ಯುವಕನೊಬ್ಬ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ.

ಮಾಜ್ ರಸೀದ್ ಸನದಿ (19) ಚಾಕು ಇರಿತದಿಂದ ಗಾಯಗೊಂಡಿರುವ ವಿದ್ಯಾರ್ಥಿ. ಗಾಯಾಳು ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪಂತಬಾಳೆಕುಂದ್ರಿ-ಸಿಬಿಇ ಬಸ್ ನಲ್ಲಿ ಬೆಳಗಾವಿ ನಗರಕ್ಕೆ ಬರುತ್ತಿದ್ದಾಗ ಕಿಟಕಿ ಸೀಟ್ ವಿಚಾರವಗಿ ಮಾಜ್ ಮತ್ತು ಕೆಲ ಯುವಕರ ನಡುವೆ ಜಗಳ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿದ್ದು, ಯುವಕರ ಗುಂಪು ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಿಚಿಯ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular